Team India: ಭಾನುವಾರ ಭಾರತಕ್ಕೆ ಎರಡು ಪಂದ್ಯ..!

Team India: ಭಾನುವಾರ ಭಾರತ ತಂಡವು ಎರಡು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಕಣಕ್ಕಿಳಿದರೆ, ಎರಡನೇ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪುರುಷರ ತಂಡ ಕಣಕ್ಕಿಳಿಯಲಿದೆ. ಇಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡವು ಟಿ20 ವಿಶ್ವಕಪ್​ ಪಂದ್ಯವಾಡುತ್ತಿರುವುದು ವಿಶೇಷ.

|

Updated on: Oct 05, 2024 | 11:07 AM

ಅಕ್ಟೋಬರ್ 6, ಭಾನುವಾರ ಟೀಮ್ ಇಂಡಿಯಾ ಎರಡು ಪಂದ್ಯಗಳನ್ನಾಡಲಿದೆ. ಒಂದು ಪಂದ್ಯವು ದುಬೈನಲ್ಲಿ ನಡೆದರೆ, ಮತ್ತೊಂದು ಪಂದ್ಯವು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಜರುಗಲಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ನಾಳೆ ಸೂಪರ್ ಸಂಡೆ.

1 / 6
ಇಲ್ಲಿ ಮೊದಲ ಮ್ಯಾಚ್ ನಡೆಯುತ್ತಿರುವುದು ಮಹಿಳಾ ಟಿ20 ವಿಶ್ವಕಪ್​ನಲ್ಲಿ ಎಂಬುದು ವಿಶೇಷ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ಮಧ್ಯಾಹ್ನ 3.30 ರಿಂದ ಶುರುವಾಗಲಿದೆ.

2 / 6
ಹಾಗೆಯೇ ರಾತ್ರಿ 7 ಗಂಟೆಯಿಂದ ಆರಂಭವಾಗಲಿರುವ ಪಂದ್ಯದಲ್ಲಿ ಭಾರತ ಪುರುಷರ ತಂಡ ಕಣಕ್ಕಿಳಿಯಲಿದೆ. ಈ ಪಂದ್ಯದೊಂದಿಗೆ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟಿ20 ಸರಣಿ ಶುರುವಾಗಲಿದೆ. ಈ ಪಂದ್ಯವನ್ನು ಜಿಯೋ ಸಿನಿಮಾ ಆ್ಯಪ್ ಹಾಗೂ ಸ್ಪೋರ್ಟ್ಸ್-18 ಚಾನೆಲ್​ಗಳಲ್ಲಿ ವೀಕ್ಷಿಸಬಹುದು.

3 / 6
ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಮಹಿಳಾ ಟಿ20 ವಿಶ್ವಕಪ್​ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಆ್ಯಪ್​ನಲ್ಲಿ ಉಚಿತವಾಗಿ ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ನೋಡಬಹುದು.

4 / 6
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್(ನಾಯಕ) ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.

5 / 6
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯದ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.

6 / 6
Follow us