AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 23 ಪದಕಗಳನ್ನು ಗೆದ್ದ ನೀರಜ್ ಚೋಪ್ರಾ: ಇಲ್ಲಿದೆ ಸಂಪೂರ್ಣ ಪಟ್ಟಿ

Neeraj Chopra: ಭಾರತಕ್ಕಾಗಿ ನೀರಜ್ ಚೋಪ್ರಾ ಇದುವರೆಗೆ ಒಟ್ಟು 23 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಅಥ್ಲೆಟಿಕ್ಸ್​ನಲ್ಲಿ ಚಿನ್ನದ ಹುಡುಗ ಮಾಡಿರುವ ಸಾಧನೆಗಳಾವುವು? ಈ ಸಾಧನೆಗೆ ಒಲಿದ ಪದಕಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

TV9 Web
| Edited By: |

Updated on:Aug 28, 2023 | 1:27 AM

Share
ಹಂಗೇರಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ​ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದಾರೆ. ಪುರುಷರ ಜಾವೆಲಿನ್​ ಥ್ರೋ ಫೈನಲ್​ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು.

1 / 25
ಇದಕ್ಕೂ ಮುನ್ನ ನೀರಜ್ ಚೋಪ್ರಾ ಭಾರತಕ್ಕಾಗಿ 22 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಹಾಗಿದ್ರೆ ಅಥ್ಲೆಟಿಕ್ಸ್​ನಲ್ಲಿ ಚೋಪ್ರಾ ಮಾಡಿರುವ ಸಾಧನೆಗಳಾವುವು? ಈ ಸಾಧನೆಗೆ ಒಲಿದ ಪದಕಗಳಾವುವು ಎಂದು ತಿಳಿಯೋಣ...

2 / 25
1- ಸೌತ್ ಏಷ್ಯನ್ ಗೇಮ್ಸ್:  ನೀರಜ್ ಚೋಪ್ರಾ ಮೊದಲ ಬಾರಿಗೆ ಪದಕ ಗೆದ್ದಿದ್ದು 2016ರ ಸೌತ್ ಏಷ್ಯನ್ ಗೇಮ್ಸ್​ನಲ್ಲಿ. ಅಂದು 82.33 ಮೀಟರ್ ಭರ್ಜಿ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

3 / 25
2- ಏಷ್ಯನ್ ಜೂನಿಯರ್ ಚಾಂಪಿಯನ್​ಶಿಪ್: 2016ರ ಕಿರಿಯರ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ 77.60 ಮೀಟರ್ ಜಾವೆಲಿನ್ ಎಸೆದು ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

4 / 25
3- ವರ್ಲ್ಡ್​ ಅಂಡರ್ 20 ಚಾಂಪಿಯನ್​ಶಿಪ್​: 2016ರ ಅಂಡರ್​20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್​ನಲ್ಲಿ ನೀರಜ್ ಚೋಪ್ರಾ ಮೂರನೇ ಬಾರಿ ಪದಕಕ್ಕೆ ಕೊರೊಳೊಡ್ಡಿದ್ದರು. ಅಂದು 86.48 ಮೀಟರ್ ಭರ್ಜಿ ಎಸೆದು ಚಿನ್ನದ ಪದಕ ಗೆದ್ದಿದ್ದರು.

5 / 25
4- ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸಿರೀಸ್: 2017 ರಲ್ಲಿ ನಡೆದ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸಿರೀಸ್​ನಲ್ಲಿ 82.11 ಮೀಟರ್ ದೂರ ಭರ್ಜಿ ಎಸೆದು ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದರು.

6 / 25
5- ಗ್ರ್ಯಾಂಡ್ ಪ್ರಿಕ್ಸ್ ಸಿರೀಸ್: 2017 ರಲ್ಲೇ ನಡೆದ ಮತ್ತೊಂದು ಗ್ರ್ಯಾಂಡ್ ಪ್ರಿಕ್ಸ್​ ಸಿರೀಸ್​ನಲ್ಲಿ 83.32 ಮೀಟರ್​ ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

7 / 25
6- ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸಿರೀಸ್: 2017 ರಲ್ಲಿ ನಡೆದ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸಿರೀಸ್​ನಲ್ಲಿ 79.90 ಮೀಟರ್ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಒಂದೇ ವರ್ಷ ಮೂರು ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದರು.

8 / 25
7- ಏಷ್ಯನ್ ಚಾಂಪಿಯನ್​​​ಶಿಪ್: 2017 ರಲ್ಲಿ ನಡೆದ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ 85.23 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.

9 / 25
8- ಆಫೆನ್‌ಬರ್ಗ್ ಸ್ಪೀರ್‌ವರ್ಫ್ ಮೀಟಿಂಗ್: 2018 ರಲ್ಲಿ ನಡೆದ ಆಫೆನ್ ಬರ್ಗ್ ಮೀಟಿಂಗ್ ಗೇಮ್ಸ್​ನಲ್ಲಿ 82. 80 ಮೀಟರ್ ದೂರವನ್ನು ಕ್ರಮಿಸುವ ಮೂಲಕ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

10 / 25
9- ಕಾಮನ್​ವೆಲ್ತ್ ಗೇಮ್ಸ್​: 2018 ರಲ್ಲಿ ಮೊದಲ ಬಾರಿಗೆ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಕಾಣಿಸಿಕೊಂಡಿದ್ದ ನೀರಜ್, 86.47 ಮೀಟರ್ ದೂರಕ್ಕೆ ಭರ್ಜಿ ಎಸೆದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.

11 / 25
10- ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಮೀಟ್: 2018 ರಲ್ಲಿ ನಡೆದ ಅಥ್ಲೆಟಿಕ್ಸ್ ಮೀಟ್​ನಲ್ಲಿ 85.17 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

12 / 25
11- ಸಾವೊ ಗೇಮ್ಸ್​: 2018 ರಲ್ಲಿ ನಡೆದ ಸಾವೊ ಗೇಮ್ಸ್​ನಲ್ಲಿ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಭಾರತೀಯ ತಾರೆ ಚಿನ್ನದ ಪದಕ ಗೆದ್ದಿದ್ದರು.

13 / 25
12- ಏಷ್ಯನ್ ಗೇಮ್ಸ್​: 2018 ರಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲೂ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಅಂದು 88.06 ಮೀಟರ್ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದರು.

14 / 25
13- ಅಥ್ಲೆಟಿಕ್ಸ್ ಸೆಂಟ್ರಲ್ ನಾರ್ತ್ ವೆಸ್ಟ್ ಲೀಗ್ ಮೀಟ್: 2020 ರಲ್ಲಿ ನಡೆದ ಅಥ್ಲೆಟಿಕ್ಸ್ ಮೀಟ್​ನಲ್ಲಿ ನೀರಜ್ ಚೋಪ್ರಾ 87.86 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಒಲಿಂಪಿಕ್ಸ್​ಗೂ ನೇರ ಅರ್ಹತೆ ಪಡೆದುಕೊಂಡಿದ್ದರು.

15 / 25
14- ಸಿಡೇಡ್ ಡಿ ಲಿಸ್ಬೋವಾ ಮೀಟ್: 2021 ರಲ್ಲಿ ನಡೆದ ಅಥ್ಲೆಟಿಕ್ಸ್ ಮೀಟ್​ನಲ್ಲಿ 83.18 ಮೀಟರ್ ದೂರಕ್ಕೆ ಭರ್ಜಿ ಎಸೆದಿದ್ದ ಚೋಪ್ರಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

16 / 25
15- ಫೋಕ್ಸಾಮ್ ಗ್ರ್ಯಾಂಡ್ ಪ್ರಿಕ್ಸ್: 2021 ರ ಫೋಕ್ಸಾಮ್ ಗ್ರ್ಯಾಂಡ್ ಪ್ರಿಕ್ಸ್​ನಲ್ಲಿ 80.96 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.

17 / 25
16- ಕುರ್ಟೇನ್ ಗೇಮ್ಸ್​: 2021 ರಲ್ಲಿ ನಡೆದ ಕುರ್ಟೇನ್ ಗೇಮ್ಸ್​ನಲ್ಲಿ 86.79 ಮೀಟರ್​ ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಅಂದು ನೀರಜ್ ಚೋಪ್ರಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

18 / 25
17- ಒಲಿಂಪಿಕ್ ಗೇಮ್ಸ್: 2021 ರಲ್ಲಿ ಟೊಕಿಯೊ ಒಲಿಂಪಿಕ್ಸ್​ನಲ್ಲಿ 87.58 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಅಥ್ಲೆಟಿಕ್ಸ್​ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು.

19 / 25
18- ಪಾವೊ ನೂರ್ಮಿ ಗೇಮ್ಸ್​: 2022 ರಲ್ಲಿ ನಡೆದ ನೂರ್ಮಿ ಗೇಮ್ಸ್​ನಲ್ಲಿ 89.30 ಮೀಟರ್ ದೂರ ಎಸೆದರೂ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

20 / 25
19- ಕುರ್ಟೇನ್ ಗೇಮ್ಸ್​: 2022 ರಲ್ಲಿ ನಡೆದ ಕುರ್ಟೇನ್ ಗೇಮ್ಸ್​ನಲ್ಲಿ ಕಂಬ್ಯಾಕ್ ಮಾಡಿದ ನೀರಜ್ ಚೋಪ್ರಾ ಮತ್ತೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಅಂದು 86.69 ಮೀಟರ್​ ದೂರದವರೆಗೆ ಭರ್ಜಿ ಎಸೆದಿದ್ದರು.

21 / 25
20- ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: 2022 ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 88.13 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದರು.

22 / 25
21- ಡೈಮಂಡ್ ಲೀಗ್ ಲೌಸನ್: 2022 ರಲ್ಲಿ ನಡೆದ ಡೈಮಂಡ್ ಲೀಗ್​ನಲ್ಲಿ 89.08 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

23 / 25
22- ಡೈಮಂಡ್ ಲೀಗ್ ಜ್ಯೂರಿಚ್​: 2022 ರಲ್ಲಿ ಜ್ಯೂರಿಚ್​ನಲ್ಲಿ ನಡೆದ ಡೈಮಂಡ್ ಲೀಗ್​ನಲ್ಲೂ ವಿನ್ನರ್ ಪಟ್ಟ ಅಲಂಕರಿಸುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದರು. ಅಂದು 88.44 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಈ ಸಾಧನೆ ಮಾಡಿದ್ದರು.

24 / 25
23- ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಇದೀಗ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 88.17 ಮೀಟರ್​ ದೂರ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

25 / 25

Published On - 1:23 am, Mon, 28 August 23

Web contact
Web contact

TV9 Kannada

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​

ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ