Kannada News Photo gallery Neethu vanajakshi old photos Here is The childhood Photo of Bigg Boss transgender contestant Neethu Vanajakshi
ಮಂಜುನಾಥ್ ಆಗಿದ್ದಾಗ ನೀತು ವನಜಾಕ್ಷಿ ಹೇಗಿದ್ರು ನೋಡಿ.. ಇಲ್ಲಿವೆ ಫೋಟೋಸ್
Malatesh Jaggin | Updated By: ರಾಜೇಶ್ ದುಗ್ಗುಮನೆ
Updated on:
Oct 18, 2023 | 12:10 PM
Neethu Vanajakshi Childhood Photos: ನೀತು ಅವರ ಮೂಲ ಹೆಸರು ಮಂಜುನಾಥ್. ಅವರು ಹುಟ್ಟುವಾಗ ಹುಡುಗನ ರೀತಿಯೇ ಇದ್ದರು. ಬೆಳೆಯುತ್ತಾ ಹೋದಂತೆ ಅವರ ದೇಹದಲ್ಲಿ ಬದಲಾವಣೆ ಆಯಿತು. ಈಗ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ.
1 / 6
ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಅವರು ಬಿಗ್ ಬಾಸ್ಗೆ ಕಾಲಿಟ್ಟು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಟಾಸ್ಕ್ಗಳನ್ನು ಉತ್ತಮವಾಗಿ ಆಡಿ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅವರ ಬಾಲ್ಯದ ಫೋಟೋಗಳು ಲಭ್ಯವಾಗಿವೆ.
2 / 6
ನೀತು ಅವರ ಮೂಲ ಹೆಸರು ಮಂಜುನಾಥ್. ಅವರು ಹುಟ್ಟುವಾಗ ಹುಡುಗನ ರೀತಿಯೇ ಇದ್ದರು. ಬೆಳೆಯುತ್ತಾ ಹೋದಂತೆ ಅವರ ದೇಹದಲ್ಲಿ ಬದಲಾವಣೆ ಆಯಿತು. ಈಗ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ.
3 / 6
ಏಳನೇ ತರಗತಿಯಲ್ಲಿ ನೀತು ಅವರಿಗೆ ‘ನಾನು ಅವನಲ್ಲ ಅವಳು’ ಎನ್ನುವ ಭಾವನೆ ಕಾಡಲು ಶುರುವಾಯಿತು. ಅವರು ಹುಡುಗರ ಕಡೆ ಹೆಚ್ಚು ಅಟ್ರ್ಯಾಕ್ಟ್ ಆಗುತ್ತಿದ್ದರು. ಹೀಗೇಕೆ ಎನ್ನುವ ಪ್ರಶ್ನೆ ಅವರಲ್ಲಿ ಮೂಡೋಕೆ ಆರಂಭಿಸಿತ್ತು.
4 / 6
ಮಂಜುನಾಥ್ ಅವರು ಸಂಪೂರ್ಣವಾಗಿ ಬದಲಾದರು. ಅವರು ಹೆಸರನ್ನು ನೀತು ಎಂದು ಬದಲಾಯಿಸಿಕೊಂಡರು. ಅವರ ಬಾಲ್ಯದ ಫೋಟೋಗಳನ್ನು ಕುಟುಂಬದವರು ಟಿವಿ9 ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
5 / 6
ತಾಯಿ ವನಜಾಕ್ಷಿ ಅವರು ನೀತು ಅವರ ಬೆಂಬಲಕ್ಕೆ ನಿಂತರು. ಮಗನಲ್ಲಿ ಆದ ಬದಲಾವಣೆಯನ್ನು ಅವರ ತಾಯಿ ಒಪ್ಪಿಕೊಂಡಿದ್ದಾರೆ. ಸಮಾಜದಿಂದ ನೀತು ಅವರನ್ನು ದೂರ ಇಡದೆ ಎಲ್ಲರ ಜೊತೆ ಬೆರೆಯಲು ಅವರು ಅನುವು ಮಾಡಿಕೊಟ್ಟಿದ್ದಾರೆ.
6 / 6
ಸದ್ಯ ಬಿಗ್ ಬಾಸ್ ಮನೆಯಲ್ಲಿ ನೀತು ಅವರು ಉತ್ತಮ ಆಟ ಆಡುತ್ತಿದ್ದಾರೆ. ತಮ್ಮದೇ ಟ್ಯಾಟೂ ಸ್ಟುಡಿಯೋನ ಅವರು ಹೊಂದಿದ್ದಾರೆ.