ಐಟಿ ಮಂದಿಯ ವೃತ್ತಿಜೀವನದ ಕಥೆ ತೆರೆದಿಡುವ ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ ನವೆಂಬರ್ 24ಕ್ಕೆ ಬಿಡುಗಡೆ

|

Updated on: Nov 06, 2023 | 9:37 PM

New Kannada Movie: ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿರುವ ಯುವಕರು ಸದಾ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅದೇ ವಿಚಾರವನ್ನು ಕೇಂದ್ರವಾಗಿ ಇಟ್ಟುಕೊಂಡು ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ ಸಿದ್ಧವಾಗಿದೆ. ನವೆಂಬರ್ 24ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆರ್ಯನ್ ಹರ್ಷ, ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

1 / 7
ಬೆಂಗಳೂರಿನ ಬ್ಯುಸಿ ಏರಿಯಾಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಕೂಡ ಇದೆ. ಈ ಏರಿಯಾದ ಹೆಸರನ್ನು ಕೇಳದವರೇ ಇಲ್ಲ ಎನ್ನಬಹುದು. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಎಲೆಕ್ಟ್ರಾನಿಕ್ ಸಿಟಿ ಸಖತ್​ ಪರಿಚಿತವಾಗಿರುತ್ತದೆ.

2 / 7
ರಾಜ್ಯ ರಾಜಧಾನಿಯ ಈ ಪ್ರಸಿದ್ಧ ಏರಿಯಾದಲ್ಲಿ ಹಲವಾರು ಐಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ವಿಶೇಷ ಏನೆಂದರೆ, ಈಗ ‘ಎಲೆಕ್ಟ್ರಾನಿಕ್ ಸಿಟಿ’ ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾವೊಂದು ನಿರ್ಮಾಣವಾಗಿದೆ.

3 / 7
ನವೆಂಬರ್ 24 ರಂದು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ತೆರೆಗೆ ಬರುತ್ತಿದೆ. ಮೂಲತಃ ಐಟಿ ಉದ್ಯೋಗಿ ಆಗಿರುವ ಆರ್. ಚಿಕ್ಕಣ್ಣ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿ ನಿರ್ದೇಶನ ಕೂಡ ಮಾಡಿದ್ದಾರೆ. ಈವರೆಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ.

4 / 7
ಈಗಿನ ಬಹುತೇಕ ಎಲ್ಲ ಯುವಕ-ಯುವತಿಯರು ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸದಾ ಒತ್ತಡದಲ್ಲಿರುತ್ತಾರೆ. ಅಂತಹ ಉದ್ಯೋಗಿಯ ವರ್ಕ್ ಲೈಫ್  ಹೇಗಿರುತ್ತೆ ಎನ್ನುವ ಅಂಶವನ್ನೇ ಇಟ್ಟುಕೊಂಡು ಈ ಸಿನಿಮಾ ತಯಾರಾಗಿದೆ.

5 / 7
ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಇದೆ. ‘ಎಲೆಕ್ಟ್ರಾನಿಕ್ ಸಿಟಿ’ ಈಗಾಗಲೇ ಹಲವು ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್​ಗಳಲ್ಲಿ ಪ್ರದರ್ಶನ ಕಂಡಿದೆ. ಒಂದಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದು, ಈಗ ಬಿಡುಗಡೆ ಆಗುತ್ತಿದೆ.

6 / 7
ಆರ್ಯನ್ ಹರ್ಷ ಅವರು ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರ ಜೊತೆ ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ.

7 / 7
ಈ ಸಿನಿಮಾಗೆ ವಿನು ಮನಸು ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಶ್ರೀವಾಸ್ತವ್ ಅವರು ಹಾಡುಗಳನ್ನು ಬರೆದಿದ್ದಾರೆ. ರಾಜ ಶಿವಶಂಕರ್ ಅವರ ಛಾಯಾಗ್ರಹಣ, ಸೌಂದರ್ ರಾಜ್ ಅವರ ಸಂಕಲನ, ಹಂಪಿ ಸುಂದರ್ ಅವರ ಕಲಾ ನಿರ್ದೇಶನ ಈ ಸಿನಿಮಾಗಿದೆ.