ಪ್ರೀತಿಸಿ ಮದ್ವೆಯಾದ ಏಳೇ ತಿಂಗಳಲ್ಲಿ ಯುವತಿ ಸಾವು, ರಾತ್ರೋರಾತ್ರಿ ತವರು ಮನೆಯಿಂದ ಕರೆದುಕೊಂಡು ಬಂದು ಪತಿ ಮಾಡಿದ್ದೇನು?
ಇಷ್ಟಪಟ್ಟು ಪ್ರೀತಿ ಮದುವೆಯಾದ ಏಳೇ ತಿಂಗಳಿಗೆ ನವವಿವಾಹಿತೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾಳೆ. ಗಣಪತಿ ಹಬ್ಬಕ್ಕೆಂದು ತವರು ಮನೆಗೆ ಹೋದ್ದಾಕೆಯನ್ನು ಪತಿ ರಾತ್ರೋರಾತ್ರಿ ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದಲ್ಲಿ ತನ್ನ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಏನಾಯ್ತೋ ಏನೋ ನವವಿವಾಹಿತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಜೀವಬಿಟ್ಟಿದ್ದಾಳೆ.
1 / 8
ಪ್ರೀತಿಸಿ ಮದುವೆಯಾದ (Love Marriage) ಏಳೇ ತಿಂಗಳಿಗೆ ನವವಿವಾಹಿತೆ ಅನುಮಾನಸ್ಪದ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ(Shivamogga) ಎನ್ ಟಿ ರಸ್ತೆಯ ಶಾರದಾ ನಗರದ ನವವಿವಾಹಿತೆ ನಮಿತಾ (22) ಮೃತಪಟ್ಟಿದ್ದು,
2 / 8
ಗಣೇಶ ಹಬ್ಬಕ್ಕೆಂದು ತವರು ಮನೆಗೆ ಹೋಗಿದಾಕೆಯನ್ನು ಸತೀಶ್ ರಾತ್ರೋರಾತ್ರಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆದ್ರೆ, ಅದೇನಾಯ್ತೋ ಏನೋ ತಡರಾತ್ರಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಮಿತಾ ಮೃತಪಟ್ಟಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.
3 / 8
ಗಣೇಶ ಹಬ್ಬಕ್ಕೆಂದು ನಮಿತಾ ನಿನ್ನೆ (ಸೆಪ್ಟೆಂಬರ್ 18) ರಾತ್ರಿ ಶಿವಮೊಗ್ಗದ ಶಾರದಾ ನಗರದ ನಿವಾಸದಲ್ಲಿರುವ ತವರು ಮನೆಗೆ ಬಂದಿದ್ದಳು.
4 / 8
ಆದ್ರೆ, ಪತಿ ಸತೀಶ್ ಅಂದೇ ರಾತ್ರಿ 11. 30ಕ್ಕೆ ಹೆಂಡತಿ ನಮಿತಾಳನ್ನು ತವರು ಮನೆಯಿಂದ ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದ್ರೆ, ಅದೇನಾಯ್ತೋ ಏನೋ ತಡರಾತ್ರಿ 12-15ಕ್ಕೆ ನಮಿತಾ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
5 / 8
ಪ್ರೀತಿಸಿ ಮದುವೆಯಾಗಿದ್ದ ಪತಿ ಸತೀಶ್ ಮತ್ತು ಆತನ ತಾಯಿ ಗಿರಿಜಮ್ಮ, ನಮಿತಾಳಿಗೆ ನಿರಂತರ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಹಬ್ಬದ ದಿನವೇ ಮತ್ತೆ ಪತಿ ಪತ್ನಿ ನಡುವೆ ಗಲಾಟೆಯಾಗಿದೆ. ಆ ವೇಳೆ ನಮಿಳಾನ್ನು ಸತೀಶ್ ಕೊಲೆ ಮಾಡಿದ್ದಾನೆ ಎಂದು ನಮಿತಾಳ ಕುಟುಂಬಸ್ಥರು ಆರೋಪಿಸಿದ್ದಾರೆ.
6 / 8
ಶಿವಮೊಗ್ಗ ಗ್ರಾಮಾಂತರ ಪೊಲೀಸರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗೆ ಮೃತ ನಮಿತಾಳ ಗಂಡ ಸತೀಶ್ ಹಾಗೂ ಈತನ ತಾಯಿ ಅತ್ತೆ ಗಿರಿಜಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
7 / 8
ಪ್ರೀತಿಸಿ ಮದುವೆಯಾದ ಏಳೇ ತಿಂಗಳಿಗೆ ನವವಿವಾಹಿತೆ ಅನುಮಾನಸ್ಪದ ಸಾವನ್ನಪ್ಪಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.
8 / 8
ಈ ಬಗ್ಗೆ ಮೃತ ನಮಿತಾಳ ಗಂಡ ಮತ್ತು ಅತ್ತೆಯನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ನಮಿತಾಳ ಸಾವಿಗೆ ನಿಜವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.