
ಟಾಲಿವುಡ್ ನಟಿ, ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ ಅವರು ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಹೊಸ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪತಿ ಚೈತನ್ಯ ಜೊನ್ನಲಗಡ್ಡ ಜೊತೆಗೆ ನಿಹಾರಿಕಾ ಕೊನಿಡೆಲಾ ಅವರಿಗೆ ವೈಮನಸ್ಸು ಮೂಡಿ ಬಹಳ ದಿನ ಕಳೆದಿದೆ. ಇಬ್ಬರೂ ಶೀಘ್ರದಲ್ಲೇ ಡಿವೋರ್ಸ್ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗಾಸಿಪ್ ಹಬ್ಬಿದೆ.

ಸಂಸಾರದಲ್ಲಿ ಉಂಟಾದ ಬಿರುಕಿನ ಬಗ್ಗೆ ನಿಹಾರಿಕಾ ಕೊನಿಡೆಲಾ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆರಾಮಾಗಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ಡಿವೋರ್ಸ್ ಚಿಂತೆ ಮರೆತು ಖುಷಿಯಾಗಿದ್ದಾರೆ ಎಂಬುದಕ್ಕೆ ಈ ಫೋಟೋಗಳೇ ಸಾಕ್ಷಿ.

ಸೋಶಿಯಲ್ ಮೀಡಿಯಾದಲ್ಲಿ ನಿಹಾರಿಕಾ ಮತ್ತು ಚೈತನ್ಯ ಜೊನ್ನಲಗಡ್ಡ ಅವರು ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ತಾವುಬ್ಬರು ಜೊತೆಯಾಗಿ ಇರುವ ಎಲ್ಲ ಫೋಟೋಗಳನ್ನು ಅವರು ಡಿಲೀಟ್ ಮಾಡಿದ್ದಾರೆ.

ಚಿರಂಜೀವಿ ಕುಟುಂಬದ ಮನೆಮಗಳಾದ ನಿಹಾರಿಕಾ ಕೊನಿಡೆಲಾ ಅವರು ನಿರ್ಮಾಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ಸೂರ್ಯಕಾಂತಂ’, ‘ಒಕ ಮನಸು’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ.