ನೋರಾ ಫತೇಹಿ ಅವರು ಬಾಲಿವುಡ್ನ ಬೇಡಿಕೆಯ ನಟಿ. ಹಲವು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿ ಅವರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಸಂಕಷ್ಟ ಒಂದು ಎದುರಾಗಿತ್ತು.
ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನೋರಾ ಹೆಸರು ಸೇರಿಕೊಂಡಿತ್ತು. ಇದಕ್ಕಾಗಿ ಅವರು ವಿಚಾರಣೆ ಕೂಡ ಎದುರಿಸಿದ್ದರು.
ಈಗ ನೋರಾ ಅವರು ಕೇಸ್ನ ತಲೆಬಿಸಿ ಬಿಟ್ಟು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನೋರಾಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಹೆಚ್ಚಬಹುದು. ಈಗಾಗಲೇ ನಟಿ ಜಾಕ್ವೆಲಿನ್ ವಿರುದ್ಧ ಕೇಸ್ ದಾಖಲಾಗಿದೆ.
ನೋರಾ ಅವರು ಸುಕೇಶ್ ಚಂದ್ರಶೇಖರ್ ಜತೆ ಕ್ಲೋಸ್ ಆಗಿದ್ದರು ಎನ್ನಲಾಗಿದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.