
ನಟಿ ನೋರಾ ಫತೇಹಿ ಅವರು ವಿಶೇಷ ಸಾಂಗ್ಗಳಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 4 ಕೋಟಿಗೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.

ಈಗ ನೋರಾ ಫತೇಹಿ ಅವರು ಹೊಸ ಡ್ರೆಸ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಡ್ರೆಸ್ ಸಾಕಷ್ಟು ಝಗಮಗಿಸುತ್ತಿದೆ.

ನೋರಾ ಹಾಕಿದ ಬಟ್ಟೆ ಚರ್ಮದ ಬಣ್ಣದ ರೀತಿಯಲ್ಲೇ ಇದೆ. ಇದನ್ನು ನೋಡಿದ ಅನೇಕರು ‘ನೋರಾ ಬಟ್ಟೆಯನ್ನೇ ಹಾಕಿಲ್ಲವೇನೋ ಅಂದುಕೊಂಡೆ’ ಎಂಬ ಕಮೆಂಟ್ ಹಾಕಿದ್ದಾರೆ.

ನೋರಾ ಅವರು ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಜತೆಗೆ ಅವರು ಲಿಂಕ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. 200 ಕೋಟಿ ರೂಪಾಯಿ ಪ್ರಕರಣದಲ್ಲಿ ಚಂದ್ರಶೇಖರ್ ಅರೆಸ್ಟ್ ಆಗಿದ್ದಾರೆ.

ನೋರಾಗೆ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಚಿತ್ರಗಳನ್ನು ಅವರು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಡ್ಯಾನ್ಸ್ ಇಷ್ಟಪಡುವವರ ಸಂಖ್ಯೆ ದೊಡ್ಡದಿದೆ.