- Kannada News Photo gallery Haripriya and Vasishta Simha invite Kannada Film Industry celebrities to their wedding
Simhapriya Marriage: ಚಂದನವನದ ತಾರೆಯರಿಗೆ ಸಿಂಹಪ್ರಿಯ ಮದುವೆ ಆಹ್ವಾನ; ಆಮಂತ್ರಣ ಪತ್ರಿಕೆ ನೀಡಿದ ಹರಿಪ್ರಿಯಾ-ವಸಿಷ್ಠ
Haripriya | Vasishta Simha: ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಜನವರಿ 26ರಂದು ಹಸೆಮಣೆ ಏರಲಿದ್ದಾರೆ. ಆ ಶುಭಕಾರ್ಯಕ್ಕೆ ಕನ್ನಡ ಚಿತ್ರರಂಗದ ಅನೇಕರನ್ನು ಆಹ್ವಾನಿಸಲಾಗುತ್ತಿದೆ.
Updated on:Jan 16, 2023 | 6:51 PM

ಕಿಚ್ಚ ಸುದೀಪ್ ಅವರ ಮನೆಗೆ ತೆರಳಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಮದುವೆ ಸಾಕ್ಷಿ ಆಗಲಿದ್ದಾರೆ.

ಚಂದನವನದ ಹಿರಿಯ ನಟ ಅನಂತ್ ನಾಗ್ ಅವರನ್ನು ಮದುವೆಗೆ ಆಹ್ವಾನಿಸಲಾಗಿದೆ. ಹಲವು ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಸಪ್ತಪದಿ ತುಳಿಯಲಿದ್ದಾರೆ.

ಆಹ್ವಾನ ಸ್ವೀಕರಿಸಿದ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಕ್ಯೂಟ್ ಜೋಡಿಗೆ ಶುಭ ಹಾರೈಸಿದ್ದಾರೆ. ಅದ್ದೂರಿಯಾಗಿ ಈ ಮದುವೆ ನಡೆಯಲಿದೆ.

‘ಗೋಲ್ಡನ್ ಕ್ವೀನ್’ ಅಮೂಲ್ಯ ಹಾಗೂ ಜಗದೀಶ್ ದಂಪತಿಗೆ ಹರಿಪ್ರಿಯಾ-ವಸಿಷ್ಠ ಸಿಂಹ ಅವರು ಆಮಂತ್ರಣ ನೀಡಿದ್ದಾರೆ.

ನೆನಪಿರಲಿ ‘ಪ್ರೇಮ್’ ಅವರ ನಿವಾಸಕ್ಕೆ ತೆರಳಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಮದುವೆ ಆಮಂತ್ರಣ ನೀಡಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗೆ ಸಿಂಹಪ್ರಿಯಾ ಜೋಡಿಯು ಪ್ರೀತಿಯಿಂದ ಆಹ್ವಾನ ನೀಡಿದೆ. ಈ ಫೋಟೋಗಳು ವೈರಲ್ ಆಗಿವೆ.

‘ರಿಯಲ್ ಸ್ಟಾರ್’ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಗೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಹ್ವಾನ ನೀಡಿದ್ದಾರೆ. ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಮೈಸೂರಿಯಲ್ಲಿ ಸಿಂಹಪ್ರಿಯಾ ಮದುವೆ ನಡೆಯಲಿದೆ. ಈ ನವ ಜೋಡಿಗೆ ‘ನವರಸ ನಾಯಕ’ ಜಗ್ಗೇಶ್ ಮತ್ತು ಪರಿಮಳಾ ಅವರು ಮನಸಾರೆ ಹರಸಿದ್ದಾರೆ.

ಧ್ರುವ ಸರ್ಜಾ ಅವರನ್ನು ಸಿಂಹಪ್ರಿಯಾ ಜೋಡಿ ಪ್ರೀತಿಯಿಂದ ಆಮಂತ್ರಿಸಿದೆ. ಮೈಸೂರಿನಲ್ಲಿ ಮದುವೆ ನಡೆದ ಬಳಿಕ ಬೆಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.

ಸೃಜನ್ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರಿಗೂ ಆಹ್ವಾನ ಪತ್ರಿಕೆ ನೀಡಲಾಗಿದೆ. ಚಿತ್ರರಂಗದ ಹಲವರನ್ನು ಆಹ್ವಾನಿಸಲಾಗುತ್ತಿದೆ.
Published On - 6:51 pm, Mon, 16 January 23




