
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಎನಿಸುವಷ್ಟು ಸಾಧನೆ ಮಾಡುತ್ತಿದೆ. ಚಂದ್ರಯಾನ, ಗಗನಯಾನ, ಮಂಗಳಯಾನಗಳನ್ನು ಕೈಗೊಳ್ಳುತ್ತಿದೆ. ಸ್ವಂತವಾಗಿ ರಾಕೆಟ್ಗಳನ್ನು ತಯಾರಿಸುತ್ತಿದೆ. ಸಾಕಷ್ಟು ನೌಕೆಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುತ್ತಿದೆ. ಬೇರೆ ಬೇರೆ ದೇಶಗಳವರು ತಮ್ಮ ಸೆಟಿಲೈಟ್ಗಳನ್ನು ಭಾರತದ ಮೂಲಕ ಆಗಸಕ್ಕೆ ಕಳುಹಿಸುತ್ತಿರುವ ಸಂಖ್ಯೆ ವರ್ಷದಿಂದೊರ್ಷಕ್ಕೆ ಹೆಚ್ಚುತ್ತಲೇ ಇದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೆಟಿಲೈಟ್ ಉಡಾವಣೆ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬಂದಿರುವ ವಿಚಾರವನ್ನು ಹಂಚಿಒಂಡಿದ್ದಾರೆ. ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಅವರು ಒಂದಷ್ಟು ಅಂಕಿ ಅಂಶಗಳಿರುವ ಗ್ರಾಫಿಕ್ಗಳನ್ನು ಶೇರ್ ಮಾಡಿದ್ದಾರೆ. ‘ಬಾಹ್ಯಾಕಾಶ ಕ್ಷೇತ್ರದಲ್ಲಿ ನೀವು ಭಾರತವನ್ನು ನಂಬಬಹುದು,’ ಎನ್ನುವ ಸಂದೇಶ ರವಾನಿಸಿದ್ದಾರೆ.

ಕಳೆದ 10 ವರ್ಷದಲ್ಲಿ ಭಾರತದಿಂದ ಹತ್ತಿರ ಹತ್ತಿರ 400 ವಿದೇಶೀ ಸೆಟಿಲೈಟ್ಗಳನ್ನು ಲಾಂಚ್ ಮಾಡಲಾಗಿದೆ. 1979ರಿಂದ 2014ರವರೆಗೆ 35 ವರ್ಷದಲ್ಲಿ ಭಾರತದಿಂದ ಉಡಾವಣೆಗೊಂಡ ವಿದೇಶೀ ಸೆಟಿಲೈಟ್ಗಳ ಸಂಖ್ಯೆ 35 ಮಾತ್ರ ಇತ್ತು. 2014ರಿಂದ ಈಚೆಗೆ 398 ವಿದೇಶೀ ಸೆಟಿಲೈಟ್ಗಳನ್ನು ಭಾರತದಿಂದ ಲಾಂಚ್ ಮಾಡಲಾಗಿದೆ.

ಇದೂವರೆಗೆ ಭಾರತದಿಂದ ಉಡಾವಣೆಗೊಂಡ ಒಟ್ಟು ಸೆಟಿಲೈಟ್ಗಳ ಸಂಖ್ಯೆ 563 ಇದೆ. ಇದರಲ್ಲಿ ವಿದೇಶೀ ಸೆಟಿಲೈಟ್ಗಳು ಒಳಗೊಂಡಿವೆ. 2014ಕ್ಕೆ ಮುನ್ನ ಭಾರತದಿಂದ ಲಾಂಚ್ ಆದ ಒಟ್ಟು ಸೆಟಿಲೈಟ್ಗಳ ಸಂಖ್ಯೆ 106 ಮಾತ್ರ. ಕಳೆದ 10 ವರ್ಷದಲ್ಲಿ ಉಡಾವಣೆಗೊಂಡಿರುವುದು ಬರೋಬ್ಬರಿ 457 ಸೆಟಿಲೈಟ್ಗಳು. ಈ ಗ್ರಾಫಿಕ್ ಅನ್ನು ಪ್ರಧಾನಿಗಳು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.

1979ರಿಂದ 2014ರವರೆಗೆ ಸರಾಸರಿಯಾಗಿ ಒಂದು ವರ್ಷದಲ್ಲಿ 1.2 ಸೆಟಿಲೈಟ್ಗಳ ಉಡಾವಣೆ ಭಾರತದಿಂದ ಆಗಿದೆ. 2014ರಿಂದ ಈಚೆಗಿನ ಅಂಕಿ ಅಂಶದ ಪ್ರಕಾರ ಉಡಾವಣೆಗೊಳ್ಳುತ್ತಿರುವ ಸೆಟಿಲೈಟ್ಗಳು ಪ್ರತೀ ವರ್ಷ ಸರಾಸರಿ 5.2 ಇದೆ. ಭಾರತದಲ್ಲಿ ವಿಶ್ವಾಸಾರ್ಹ ಎನಿಸಿರುವ ಮತ್ತು ಪ್ರಬಲವಾಗಿರುವ ರಾಕೆಟ್ಗಳು ತಯಾರಾಗುತ್ತಿರುವುದು ಪ್ರಮುಖ ಕಾರಣ.