Kannada News Photo gallery One Point One Solutions becomes multibagger stock creates great wealth for investors, read in Kannada
ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು, 4 ವರ್ಷದಲ್ಲಿ 44 ಪಟ್ಟು ಲಾಭ; ಪಕ್ಕಾ ಮಲ್ಟಿಬ್ಯಾಗರ್ ಸ್ಟಾಕು
ನವದೆಹಲಿ, ಆಗಸ್ಟ್ 27: ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಮಲ್ಟಿಬ್ಯಾಗರ್ ಸ್ಟಾಕ್ಗಳಿವೆ. ಪೆನ್ನಿಸ್ಟಾಕ್ಗಳಾಗಿದ್ದವು ನೋಡ ನೋಡುತ್ತಿದ್ದಂತೆಯೇ ಅಡಕೆ ಮರದಂತೆ ಬೆಳೆದುಬಿಟ್ಟಿರುತ್ತವೆ. ಹೂಡಿಕೆದಾರರಿಗೆ ಸಿಕ್ಕಾಪಟ್ಟೆ ಲಾಭ ತಂದುಕೊಟ್ಟ ಇಂಥ ಸ್ಟಾಕ್ಗಳಲ್ಲಿ ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಒಂದು.
1 / 5
ಷೇರು ಮಾರುಕಟ್ಟೆಯಲ್ಲಿ ಗಮನಾರ್ಹವಾಗಿ ಬೆಳೆದ ಪೆನ್ನಿ ಸ್ಟಾಕ್ಗಳಲ್ಲಿ ಮುಂಬೈ ಮೂಲದ ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಕಂಪನಿಯದ್ದು ಒಂದು. ಕಳೆದ ನಾಲ್ಕು ವರ್ಷದಲ್ಲಿ ಈ ಷೇರುಬೆಲೆ ಅದ್ಭುತವಾಗಿ ಬೆಳೆದಿದೆ. 2020ರ ಆಗಸ್ಟ್ನಲ್ಲಿ ಕೇವಲ 1.75 ರೂ ಇದ್ದ ಇದರ ಬೆಲೆ ಈಗ 74.60 ರೂ ಆಗಿದೆ. ಕಳೆದ ತಿಂಗಳು ಇದರ ಷೇರುಬೆಲೆ ಸಾರ್ವಕಾಲಿಕ ಗರಿಷ್ಠವಾದ 77.50 ರೂಗೆ ಏರಿತ್ತು.
2 / 5
ಸರಿಯಾಗಿ ಎರಡು ವರ್ಷದ ಹಿಂದೆ ಇದರ ಷೇರು ಬೆಲೆ 11 ರೂ ಆಸುಪಾಸಿನಲ್ಲಿತ್ತು. 2022ರ ಆಗಸ್ಟ್ 26ರಿಂದೀಚೆ ಏಳು ಪಟ್ಟು ಬೆಳೆದಿದೆ. 2021ರಲ್ಲಿ ಎರಡು ರೂ ಇದ್ದ ಅದರ ಷೇರುಬೆಲೆ ಕೆಲವೇ ತಿಂಗಳಲ್ಲಿ 10 ರೂ ಗಡಿ ದಾಟಿತ್ತು. ಹೀಗೆ ಎರಡು ಮೂರು ಹಂತಗಳಲ್ಲಿ ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು ಅಗಾಧ ಬೆಳವಣಿಗೆ ಸಾಧಿಸಿದೆ.
3 / 5
2020ರಲ್ಲಿ ಇದರ ಷೇರುಬೆಲೆ 1.75 ರೂಗೆ ಕುಸಿದಿತ್ತು. ಈ ಹಂತದಲ್ಲಿ ನೀವು ಈ ಷೇರಿನ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ನಾಲ್ಕು ವರ್ಷದಲ್ಲಿ ಆ ಹೂಡಿಕೆ ಮೌಲ್ಯ 44 ಲಕ್ಷ ರೂ ಆಗಿರುತ್ತಿತ್ತು. ಷೇರುಬೆಲೆ 10 ರೂ ಇದ್ದಾಗಲಾದರೂ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ ಏಳೂವರೆ ಲಕ್ಷ ರೂವಾದರೂ ಆಗಿರುತ್ತಿತ್ತು.
4 / 5
ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಕಂಪನಿ ನವಿ ಮುಂಬೈ ಮೂಲದ್ದಾಗಿದೆ. 2008ರಲ್ಲಿ ಇದರ ಸ್ಥಾಪನೆಯಾಗಿದೆ. ವಿವಿಧ ಉದ್ದಿಮೆಗಳಿಗೆ ಟೆಕ್ನಾಲಜಿ ಸರ್ವಿಸ್, ಬಿಸಿನೆಸ್ ಪ್ರೋಸಸ್ ಮ್ಯಾನೇಜ್ಮೆಂಟ್, ಕಸ್ಟಮರ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ಇತ್ಯಾದಿ ಸರ್ವಿಸ್ ಒದಗಿಸುತ್ತದೆ. ಕೆವೈಸಿ, ಫ್ರಾಡ್ ವೆರಿಫಿಕೇಶನ್ ಇತ್ಯಾದಿಯನ್ನು ನಿಭಾಯಿಸುತ್ತದೆ. ಬ್ಯಾಂಕಿಂಗ್, ಟೆಲಿಕಾಂ, ಇನ್ಷೂರೆನ್ಸ್, ಇ ಕಾಮರ್ಸ್ ಇತ್ಯಾದಿ ಸರ್ವಿಸ್ ಸೆಕ್ಟರ್ನ ಕಂಪನಿಗಳು ಇದರ ಗ್ರಾಹಕರು.
5 / 5
ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಬೆಳವಣಿಗೆ ಹೊಂದಲು ಕಾರಣ ಅದರ ಹಣಕಾಸು ಸ್ಥಿತಿ. ಅದರ ನಷ್ಟದ ಪ್ರಮಾಣ ಕ್ರಮೇಣ ಕಡಿಮೆ ಆಗುತ್ತಾ ಬಂದಿದ್ದು, 2022ರಲ್ಲಿ ಲಾಭ ಕಾಣತೊಡಗಿತು. ಆ ಲಾಭದ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿದೆ. ಇದರಿಂದಾಗಿ ಪೆನ್ನಿ ಸ್ಟಾಕ್ ಎನಿಸಿದ್ದ ಅದರ ಷೇರಿನ ಬೆಲೆ ಶತಕದ ಸಮೀಪ ದೌಡಾಯಿಸುತ್ತಿದೆ.