- Kannada News Photo gallery According to Chanakya niti women are powerful than men acharya chanakya explained in kannada
Women power: ಈ 4 ಗುಣಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು! ಹಾಗಾಗಿ ಪುರುಷರಿಗಿಂತ ಹೆಣ್ಮಕ್ಕಳೇ ಸ್ಟ್ರಾಂಗ್!
Chanakya Niti and women power: ಪುರುಷರಿಗಿಂತ ಮಹಿಳೆಯರು ಹೆಚ್ಚು ಭಾವನೆಗಳಿಗೆ ಒಳಗಾಗುತ್ತಾರೆ. ಪುರುಷರು ಭಾವನೆಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುತ್ತಾರೆ. ಆದರೆ ಮಹಿಳೆಯರು ಭಾವನೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಈ ಗುಣ ಹೆಣ್ಣಿನ ದೌರ್ಬಲ್ಯ ಎಂಬ ತಪ್ಪು ಕಲ್ಪನೆಯಲ್ಲಿ ಜನ ಇದ್ದಾರೆ. ಆದರೆ ಅದರಲ್ಲಿ ಸತ್ಯಾಂಶವಿಲ್ಲ. ಭಾವನೆಯೇ ಹೆಣ್ಣಿನ ಶಕ್ತಿ. ಪರಿಸ್ಥಿತಿಗೆ ಅನುಗುಣವಾಗಿ ಮಹಿಳೆಯರು ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ.
Updated on: Aug 28, 2024 | 6:06 AM

ಪುರುಷರು ಮತ್ತು ಮಹಿಳೆಯರಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆ ಯಾವಾಗಲೂ ಇರುತ್ತದೆ. ಈ ಬಗ್ಗೆ ಚರ್ಚೆಗಳೂ ನಡೆಯುತ್ತಿರುತ್ತವೆ. ಚಾಣಕ್ಯ ನೀತಿಯಲ್ಲಿಯೂ ಸಹ, ಪುರುಷರು ಮತ್ತು ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಶಕ್ತಿಶಾಲಿ ಗುಣಗಳಿವೆ ಎಂದು ಹೇಳಿದರು. ಮಹಿಳೆಯರು ಅನೇಕ ವಿಷಯಗಳಲ್ಲಿ ಪುರುಷರಿಗಿಂತ ಬಲಶಾಲಿಯಾಗಿರುತ್ತಾರೆ. ಪುರುಷರು ಯಾವಾಗಲೂ ತಾವು ಶಕ್ತಿಶಾಲಿಗಳು ಎಂಬ ಭ್ರಮೆಯನ್ನು ಹೊಂದಿರುತ್ತಾರೆ. ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಸಬಲಗೊಳಿಸುವ 4 ಗುಣಗಳನ್ನು ಉಲ್ಲೇಖಿಸಿದ್ದಾನೆ.

ಭಾವನೆಗಳ ವಿಷಯದಲ್ಲಿ: ಪುರುಷರಿಗಿಂತ ಮಹಿಳೆಯರು ಹೆಚ್ಚು ಭಾವನೆಗಳಿಗೆ ಒಳಗಾಗುತ್ತಾರೆ. ಪುರುಷರು ಭಾವನೆಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುತ್ತಾರೆ. ಆದರೆ ಮಹಿಳೆಯರು ಭಾವನೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಈ ಗುಣ ಹೆಣ್ಣಿನ ದೌರ್ಬಲ್ಯ ಎಂಬ ತಪ್ಪು ಕಲ್ಪನೆಯಲ್ಲಿ ಜನ ಇದ್ದಾರೆ. ಆದರೆ ಅದರಲ್ಲಿ ಸತ್ಯಾಂಶವಿಲ್ಲ. ಭಾವನೆಯೇ ಹೆಣ್ಣಿನ ಶಕ್ತಿ. ಪರಿಸ್ಥಿತಿಗೆ ಅನುಗುಣವಾಗಿ ಮಹಿಳೆಯರು ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಎಂತಹ ಪರಿಸ್ಥಿತಿಯೇ ಬಂದರೂ ತಾವು ಸುಲಭವಾಗಿ ಭರವಸೆಯನ್ನು ಬಿಡುವುದಿಲ್ಲ. ತಮ್ಮ ಮನೋಸ್ಥೈರ್ಯವನ್ನು ಕಾಪಿಟ್ಟುಕೊಳ್ಳುತ್ತಾರೆ.

ಹೆಚ್ಚು ಹಸಿವು: ಚಾಣಕ್ಯ ನೀತಿ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚು ಹಸಿವು ಹೊಂದಿರುತ್ತಾರೆ. ಮಹಿಳೆಯರು ಹೆಚ್ಚು ತಿನ್ನುತ್ತಾರೆ. ಇದು ಅವರ ದೈಹಿಕ ರಚನೆಯಿಂದಾಗಿ. ಮಹಿಳೆಯರಿಗೆ ಹೆಚ್ಚಿನ ಕ್ಯಾಲೋರಿಗಳು ಬೇಕಾಗುತ್ತವೆ ಮತ್ತು ಆದ್ದರಿಂದ ಸಾಮಾನ್ಯವಾಗಿ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಆಹಾರವನ್ನು ಸೇವಿಸುತ್ತಾರೆ.

ತಿಳಿವಳಿಕೆಯ ವಿಷಯದಲ್ಲಿ: ತಿಳಿವಳಿಕೆ, ಚಾತುರ್ಯ ಮತ್ತು ಬುದ್ಧಿವಂತಿಕೆಯ ವಿಷಯದಲ್ಲಿ ಸಹ, ಯಾರೂ ಮಹಿಳೆಯರಿಗೆ ಸರಿಸಾಟಿಯಾಗುವುದಿಲ್ಲ. ಮಹಿಳೆಯರು ಅನೇಕ ವಿಷಯಗಳಲ್ಲಿ ಬಹಳ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ, ಅವರು ತಮ್ಮ ಮನಸ್ಸಿನಾಳದಿಂದ ಎಚ್ಚರಿಕೆಯಿಂದ ಯೋಚಿಸುತ್ತಾರೆ. ಕಷ್ಟಕರ ಸಂದರ್ಭಗಳಿಂದ ಹೊರಬರುವುದು ಹೇಗೆ ಎಂದು ತಿಳಿದಿರುತ್ತಾರೆ.

ಧೈರ್ಯದ ಬಗ್ಗೆ: ಮಹಿಳೆಯರು ತಮಗಿಂತ ದುರ್ಬಲರು ಎಂಬ ಭ್ರಮೆ ಪುರುಷರಿಗೆ ಇರುತ್ತದೆ. ಶಾರೀರಿಕ ಬಲದ ವಿಚಾರದಲ್ಲಿ ಹಾಗೆ ಅನ್ನಿಸಬಹುದು, ಆದರೆ ಧೈರ್ಯದ ವಿಷಯಕ್ಕೆ ಬಂದರೆ ಮಹಿಳೆಯರು ಪುರುಷರಿಗಿಂತ 6 ಪಟ್ಟು ಹೆಚ್ಚು ಧೈರ್ಯಶಾಲಿಗಳು. ಎಂತಹ ಕಷ್ಟದ ಸಂದರ್ಭಗಳು ಎದುರಾದರೂ ಮಹಿಳೆಯರು ಅದನ್ನು ಎದುರಿಸಲು ಹಿಂಜರಿಯುವುದಿಲ್ಲ.




