‘ಸಮಂತಾ ನನ್ನ ಫ್ರೆಂಡ್​’: ಹೊಸ ಕಥೆ ಹೇಳಿದ ವೈರಲ್​ ಹುಡುಗಿ ಉರ್ಫಿ ಜಾವೇದ್​

ನಟಿ ಉರ್ಫಿ ಜಾವೇದ್​ ಅವರು ಖ್ಯಾತ ನಟಿ ಸಮಂತಾ ರುತ್​ ಪ್ರಭು ಬಗ್ಗೆ ಮಾತನಾಡಿದ್ದಾರೆ. ತಾವಿಬ್ಬರು ಸ್ನೇಹಿತೆಯರು ಎಂದು ಉರ್ಫಿ ಜಂಭ ಕೊಚ್ಚಿಕೊಂಡಿದ್ದಾರೆ. ಸಮಂತಾ ಹಾಗೂ ಉರ್ಫಿ ಜೊತೆ ಸ್ನೇಹ ಇದೆ ಎಂಬುದನ್ನು ತಿಳಿದು ಹಲವರಿಗೆ ಅಚ್ಚರಿ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡಿರುವ ಉರ್ಫಿ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

|

Updated on: Aug 27, 2024 | 9:35 PM

ಉರ್ಫಿ ಜಾವೇದ್​ ಅವರ ರಿಯಲ್ ಲೈಫ್​ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ ಆಸಕ್ತಿ ಇದೆ. ಬೇರೆ ಎಲ್ಲ ನಟಿಯರಿಗಿಂತ ಉರ್ಫಿ ಜಾವೇದ್​ ಜೀವನ ಶೈಲಿ ಸಖತ್​ ಡಿಫರೆಂಟ್​ ಆಗಿದೆ. ಅವರ ಬಗ್ಗೆ ಹೊಸ ವೆಬ್​ ಶೋ ಬಂದಿದೆ. ಇದರ ಹೆಸರು ‘ಫಾಲೋ ಕರ್​ ಲೋ ಯಾರ್​’.

1 / 5
ಆಗಸ್ಟ್​ 23ರಿಂದ ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ‘ಫಾಲೋ ಕರ್​ ಲೋ ಯಾರ್​’ ಶೋ ಪ್ರಸಾರ ಆಗುತ್ತಿದೆ. ಇದರಲ್ಲಿ ಉರ್ಫಿ ಅವರ ರಿಯಲ್​ ಲೈಫ್​ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇದರ ಪ್ರಚಾರ ಕಾರ್ಯದಲ್ಲಿ ಉರ್ಫಿ ಜಾವೇದ್​ ಬ್ಯುಸಿ ಆಗಿದ್ದಾರೆ.

2 / 5
‘ಫಾಲೋ ಕರ್​ ಲೋ ಯಾರ್​’ ಪ್ರಚಾರದ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ಫಿ ಅವರು ಸಮಂತಾ ರುತ್​ ಪ್ರಭು ಬಗ್ಗೆ ಮಾತನಾಡಿದ್ದಾರೆ. ‘ಸಮಂತಾ ಹಾಗೂ ನಾನು ಇನ್​ಸ್ಟಾಗ್ರಾಮ್​ ಫ್ರೆಂಡ್ಸ್​’ ಎಂದು ಉರ್ಫಿ ಜಾವೇದ್​ ಹೇಳಿದ್ದಾರೆ.

3 / 5
‘ಸಮಂತಾಗೆ ನನ್ನ ವಿಡಿಯೋ ಇಷ್ಟವಾದರೆ ಅವರು ಅದನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡುತ್ತಾರೆ. ಅದರ ಹಿಂದೆ ಏನೋ ಉದ್ದೇಶ ಇದೆ ಅಂತ ನನಗೆ ಅನಿಸುವುದಿಲ್ಲ. ಅವರ ಜೊತೆ ಇನ್ಸಾಗ್ರಾಮ್​ನಲ್ಲಿ ಮಾತುಕತೆ ಮಾಡಿದ್ದೇನೆ’ ಎಂದಿದ್ದಾರೆ ಉರ್ಫಿ.

4 / 5
ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಲ್ಲಿ ಉರ್ಫಿ ಜಾವೇದ್​ ಅವರು ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಈಗ ಅವರು ಇನ್ನೊಂದು ವಿಷಯ ತಿಳಿಸಿದ್ದಾರೆ. ‘ಅರ್ಜುನ್​ ಕಪೂರ್​ ಮೇಲೆ ನನಗೆ ಕ್ರಶ್​ ಆಗಿದೆ. ಅವರೆಂದರೆ ನನಗೆ ಇಷ್ಟ’ ಎಂದು ಉರ್ಫಿ ಮನಬಿಚ್ಚಿ ಮಾತನಾಡಿದ್ದಾರೆ.

5 / 5
Follow us