- Kannada News Photo gallery Urfi Javed talks about Samantha and Arjun Kapoor in her new show promotion Entertainment news in Kannada
‘ಸಮಂತಾ ನನ್ನ ಫ್ರೆಂಡ್’: ಹೊಸ ಕಥೆ ಹೇಳಿದ ವೈರಲ್ ಹುಡುಗಿ ಉರ್ಫಿ ಜಾವೇದ್
ನಟಿ ಉರ್ಫಿ ಜಾವೇದ್ ಅವರು ಖ್ಯಾತ ನಟಿ ಸಮಂತಾ ರುತ್ ಪ್ರಭು ಬಗ್ಗೆ ಮಾತನಾಡಿದ್ದಾರೆ. ತಾವಿಬ್ಬರು ಸ್ನೇಹಿತೆಯರು ಎಂದು ಉರ್ಫಿ ಜಂಭ ಕೊಚ್ಚಿಕೊಂಡಿದ್ದಾರೆ. ಸಮಂತಾ ಹಾಗೂ ಉರ್ಫಿ ಜೊತೆ ಸ್ನೇಹ ಇದೆ ಎಂಬುದನ್ನು ತಿಳಿದು ಹಲವರಿಗೆ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿರುವ ಉರ್ಫಿ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Updated on: Aug 27, 2024 | 9:35 PM

ಉರ್ಫಿ ಜಾವೇದ್ ಅವರ ರಿಯಲ್ ಲೈಫ್ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ ಆಸಕ್ತಿ ಇದೆ. ಬೇರೆ ಎಲ್ಲ ನಟಿಯರಿಗಿಂತ ಉರ್ಫಿ ಜಾವೇದ್ ಜೀವನ ಶೈಲಿ ಸಖತ್ ಡಿಫರೆಂಟ್ ಆಗಿದೆ. ಅವರ ಬಗ್ಗೆ ಹೊಸ ವೆಬ್ ಶೋ ಬಂದಿದೆ. ಇದರ ಹೆಸರು ‘ಫಾಲೋ ಕರ್ ಲೋ ಯಾರ್’.

ಆಗಸ್ಟ್ 23ರಿಂದ ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ‘ಫಾಲೋ ಕರ್ ಲೋ ಯಾರ್’ ಶೋ ಪ್ರಸಾರ ಆಗುತ್ತಿದೆ. ಇದರಲ್ಲಿ ಉರ್ಫಿ ಅವರ ರಿಯಲ್ ಲೈಫ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇದರ ಪ್ರಚಾರ ಕಾರ್ಯದಲ್ಲಿ ಉರ್ಫಿ ಜಾವೇದ್ ಬ್ಯುಸಿ ಆಗಿದ್ದಾರೆ.

‘ಫಾಲೋ ಕರ್ ಲೋ ಯಾರ್’ ಪ್ರಚಾರದ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ಫಿ ಅವರು ಸಮಂತಾ ರುತ್ ಪ್ರಭು ಬಗ್ಗೆ ಮಾತನಾಡಿದ್ದಾರೆ. ‘ಸಮಂತಾ ಹಾಗೂ ನಾನು ಇನ್ಸ್ಟಾಗ್ರಾಮ್ ಫ್ರೆಂಡ್ಸ್’ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.

‘ಸಮಂತಾಗೆ ನನ್ನ ವಿಡಿಯೋ ಇಷ್ಟವಾದರೆ ಅವರು ಅದನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ. ಅದರ ಹಿಂದೆ ಏನೋ ಉದ್ದೇಶ ಇದೆ ಅಂತ ನನಗೆ ಅನಿಸುವುದಿಲ್ಲ. ಅವರ ಜೊತೆ ಇನ್ಸಾಗ್ರಾಮ್ನಲ್ಲಿ ಮಾತುಕತೆ ಮಾಡಿದ್ದೇನೆ’ ಎಂದಿದ್ದಾರೆ ಉರ್ಫಿ.

ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಲ್ಲಿ ಉರ್ಫಿ ಜಾವೇದ್ ಅವರು ಎಂದಿಗೂ ಹಿಂಜರಿಕೆ ಮಾಡಿಕೊಂಡಿಲ್ಲ. ಈಗ ಅವರು ಇನ್ನೊಂದು ವಿಷಯ ತಿಳಿಸಿದ್ದಾರೆ. ‘ಅರ್ಜುನ್ ಕಪೂರ್ ಮೇಲೆ ನನಗೆ ಕ್ರಶ್ ಆಗಿದೆ. ಅವರೆಂದರೆ ನನಗೆ ಇಷ್ಟ’ ಎಂದು ಉರ್ಫಿ ಮನಬಿಚ್ಚಿ ಮಾತನಾಡಿದ್ದಾರೆ.




