- Kannada News Photo gallery Papaya Fruits Benefits: Do you know the health benefits of Papaya Fruit, Kannada Health Tips
Papaya Fruits Benefits: ಪಪ್ಪಾಯಿ ಹಣ್ಣಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?
ಪಪ್ಪಾಯಿ ಹಣ್ಣು ತಿನ್ನುವುದರಿಂದ ಅಥವಾ ಚರ್ಮದ ಮೇಲೆ ಹಚ್ಚುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ನಿಮ್ಮ ಮುಖದ ಮೇಲಿನ ಮೊಡವೆಯನ್ನು ಹೋಗಲಾಡಿಸಿ, ತ್ವಚೆಗೆ ಕಾಂತಿಯನ್ನು ನೀಡುವ ಔಷಧಿಯ ಗುಣ ಪಪ್ಪಾಯಿ ಹಣ್ಣಿನಲ್ಲಿದೆ.
Updated on:Jan 31, 2023 | 10:32 AM

ಪಪ್ಪಾಯಿ ಹಣ್ಣು ತಿನ್ನುವುದರಿಂದ ಅಥವಾ ಚರ್ಮದ ಮೇಲೆ ಹಚ್ಚುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.

ಪಪ್ಪಾಯಿ ಹಣ್ಣಿನಲ್ಲಿ ಮಿಟಮಿನ್ ಸಿ ಸಮೃದ್ಧವಾಗಿರುವುದರಿಂದ, ಇದು ನಿಮ್ಮ ಉಗುರು, ಕೂದಲು, ತ್ವಚೆ ಹಾಗೂ ಸ್ನಾಯುಗಳ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಿದೆ. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿಕೊಳ್ಳಿ.

ಪಪ್ಪಾಯಿ ಹಣ್ಣಿನಲ್ಲಿ ಶೇಕಡಾ 88ರಷ್ಟು ನೀರಿನಾಂಶವಿರುವುದರಿಂದ ಇದು ನಿಮ್ಮ ದೇಹ ತೇವಾಂಶ ಕಳೆದುಕೊಳ್ಳುವಂತೆ ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮ ಬಿರುಕು ಬಿಡುವಂತಹ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.

ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ, ನಿಮ್ಮನ್ನು ಕಾನ್ಸರ್ ಅಪಾಯದಿಂದ ದೂರವಿರಿಸುತ್ತದೆ. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಪಪ್ಪಾಯಿ ಹಣ್ಣನ್ನು ಜೋಡಿಸಿಕೊಳ್ಳಿ.

ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಗುಣ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದಂತಹ ಸಮಸ್ಯೆಯಿಂದ ದೂವಿರಲು ನಿಮ್ಮ ಆಹಾರ ಕ್ರಮದಲ್ಲಿ ಪಪ್ಪಾಯಿ ಹಣ್ಣನ್ನು ರೂಢಿಸಿಕೊಳ್ಳಿ.

ಪಪ್ಪಾಯಿ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಹೇರಳವಾಗಿದೆ.

ನಿಮ್ಮ ಮುಖದ ಮೇಲಿನ ಮೊಡವೆಯನ್ನು ಹೋಗಲಾಡಿಸಿ, ತ್ವಚೆಗೆ ಕಾಂತಿಯನ್ನು ನೀಡುವ ಔಷಧಿಯ ಗುಣ ಪಪ್ಪಾಯಿ ಹಣ್ಣಿನಲ್ಲಿದೆ.
Published On - 10:32 am, Tue, 31 January 23




