Vinesh Phogat: ಕೂದಲು, ಉಗುರು ಕಟ್.. ರಕ್ತವನ್ನೂ ಹೊರ ತೆಗೆದ್ರು; ತೂಕ ಇಳಿಸಲು ವಿನೇಶ್ ಹೋರಾಟ ಹೇಗಿತ್ತು?
Paris Olympics 2024: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ನಿಗದಿಗಿಂತ 2 ಕೆ,ಜಿ ಹೆಚ್ಚಿದ್ದ ವಿನೇಶ್, ತೂಕ ಇಳಿಸಿಕೊಳ್ಳಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ, ತೂಕ ಇಳಿಸುವ ಸಲುವಾಗಿ ವಿನೇಶ್ ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ. ಇದು ಸಾಲದೆಂಬಂತೆ ತನ್ನ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ.
1 / 6
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಮಂಗಳವಾರ ರಾತ್ರಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿದ್ದ ವಿನೇಶ್ ಫೋಗಟ್ ನಿಗದಿತ ತೂಕದ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ.
2 / 6
ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ ಪರೀಕ್ಷಿಸಿದಾಗ ವಿನೇಶ್ ಫೋಗಟ್ ಅವರ ತೂಕ 2 ಕೆಜಿ ಹೆಚ್ಚಿತ್ತು. ಹೀಗಾಗಿ ಈ ತೂಕವನ್ನು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ನಿದ್ರೆ ಮಾಡದೆ ಶ್ರಮಿಸಿದ್ದಾರೆ. ವರದಿ ಪ್ರಕಾರ, ಸೆಮಿ-ಫೈನಲ್ ಪಂದ್ಯವನ್ನು ಗೆದ್ದಾಗ ವಿನೇಶ್ ಅವರ ತೂಕ 52 ಕೆಜಿ ಇತ್ತು. ನಂತರ ತನ್ನ ತೂಕವನ್ನು 2 ಕೆಜಿಯಷ್ಟು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ಶ್ರಮಿಸಿದ್ದಾರೆ.
3 / 6
ಮಾಧ್ಯಮ ವರದಿಗಳ ಪ್ರಕಾರ, ಸೆಮಿಫೈನಲ್‌ನಲ್ಲಿ ಗೆದ್ದ ನಂತರ ವಿನೇಶ್ ಫೋಗಟ್ ವಿಶ್ರಾಂತಿ ಪಡೆದಿಲ್ಲ. ರಾತ್ರಿಯಿಡೀ ಎಚ್ಚರದಿಂದಿದ್ದ ಅವರು ತನ್ನ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಸ್ಪೋರ್ಟ್ಸ್ ಸ್ಟಾರ್ ವರದಿ ಪ್ರಕಾರ, ವಿನೇಶ್ ಫೋಗಟ್ ತೂಕ ಇಳಿಸಿಕೊಳ್ಳಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಮೊರೆ ಹೋಗಿದ್ದಾರೆ.
4 / 6
ಅಷ್ಟೇ ಅಲ್ಲ, ತೂಕ ಇಳಿಸುವ ಸಲುವಾಗಿ ವಿನೇಶ್ ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ. ಇದು ಸಾಲದೆಂಬಂತೆ ತನ್ನ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ. ಇದರಿಂದಾಗಿ ಅವರ ಕೇವಲ 1 ರಾತ್ರಿಯಲ್ಲಿ 1 ಕೆಜಿ. 850 ಗ್ರಾಂ ತೂಕವನ್ನು ಕಡಿಮೆ ಮಾಡಿದ್ದಾರೆ. ಆದರೆ ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ.
5 / 6
ಕುಸ್ತಿಯಲ್ಲಿ, ಯಾವುದೇ ಕುಸ್ತಿಪಟುವಿಗೆ ಕೇವಲ 100 ಗ್ರಾಂ ಹೆಚ್ಚುವರಿ ತೂಕದ ಭತ್ಯೆಯನ್ನು ನೀಡಲಾಗುತ್ತದೆ. ಅರ್ಥಾತ್, ವಿನೇಶ್ 50 ಕೆಜಿ, 100 ಗ್ರಾಂ ತೂಕ ಹೊಂದಿದ್ದರೆ, ಅವರು ಚಿನ್ನದ ಪದಕದ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿತ್ತು. ಆದರೆ ಅವರ ತೂಕ 50 ಗ್ರಾಂ ಹೆಚ್ಚಿದ್ದರಿಂದಾಗಿ ಅವರ ಒಲಿಂಪಿಕ್ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಕುಸ್ತಿಯಲ್ಲಿ, ಪಂದ್ಯಗಳ ಮೊದಲು ಕುಸ್ತಿಪಟುಗಳನ್ನು ತೂಕ ಮಾಡಲಾಗುತ್ತದೆ. ಇದಲ್ಲದೇ 2 ದಿನಗಳ ಕಾಲ ಇದೇ ವಿಭಾಗದಲ್ಲಿ ಕುಸ್ತಿಪಟು ತನ್ನ ತೂಕವನ್ನು ಕಾಯ್ದುಕೊಳ್ಳಬೇಕಾಗಿದ್ದರೂ ವಿನೇಶ್ಗೆ ಸಾಧ್ಯವಾಗಲಿಲ್ಲ.
6 / 6
ಇದೀಗ ಫೋಗಾಟ್ ಅನರ್ಹರಾಗಿರುವುದರಿಂದ ಅವರಿಗೆ ಬೆಳ್ಳಿ ಪದಕವೂ ಸಿಗುವುದಿಲ್ಲ. ಹೀಗಾಗಿ 50 ಕೆಜಿ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ಪದಕ ನೀಡಲಾಗುತ್ತದೆ. ಅಂದರೆ ಅಮೆರಿಕದ ಕುಸ್ತಿಪಟು ಸಾರಾ ಹಿಲ್ಡೆಬ್ರಾಂಡ್ ಫೈನಲ್ ಪಂದ್ಯವನ್ನು ಆಡದೇ ಚಿನ್ನ ಪಡೆಯಲ್ಲಿದ್ದಾರೆ. ಆದರೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ.
Published On - 1:20 pm, Wed, 7 August 24