
ಬಹುಭಾಷೆಯಲ್ಲಿ ನಟಿಸಿ ಪಾಯಲ್ ರಜಪೂತ್ ಫೇಮಸ್ ಆಗಿದ್ದಾರೆ. ಬೋಲ್ಡ್ ಪಾತ್ರಗಳನ್ನು ಮಾಡುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಅವರ ಹೊಸ ಪೋಸ್ಟರ್ ಈಗ ವೈರಲ್ ಆಗಿದೆ.

‘ಮಂಗಳವಾರಂ’ ಸಿನಿಮಾದಲ್ಲಿ ಪಾಯಲ್ ರಜಪೂತ್ ಅವರು ಟಾಪ್ಲೆಸ್ ಆಗಿ ನಟಿಸಿದ್ದಾರೆ. ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ’ ಎಂಬ ಕ್ಯಾಪ್ಷನ್ನೊಂದಿಗೆ ಪಾಯಲ್ ರಜಪೂತ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.

2017ರಿಂದಲೂ ಪಾಯಲ್ ರಜಪೂತ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಪಂಜಾಬಿ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸುವ ಮೂಲಕ ಪಾಯಲ್ ರಜಪೂತ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಸದ್ಯ ಚಿತ್ರರಂಗದಲ್ಲಿ ಅವರು ಸಖತ್ ಬ್ಯುಸಿ ಆಗಿದ್ದಾರೆ.
Published On - 7:10 pm, Tue, 25 April 23