- Kannada News Photo gallery People experiencing lingering Symptoms in the Mouth after Booster Dose Third Shot Covid19 Coronavirus Vaccine
ಕೊವಿಡ್19 ಬೂಸ್ಟರ್ ಡೋಸ್ ಪಡೆದ ನಂತರ ಕೆಲವರಲ್ಲಿ ಈ ಹೊಸ ಲಕ್ಷಣ ಕಂಡುಬಂದಿದೆ; ಏನದು? ತಜ್ಞರು ಏನು ಹೇಳುತ್ತಾರೆ?
Covid Booster Dose: ಪ್ರಸ್ತುತ ಕೊರೊನಾ ಲಸಿಕೆಯ ಬೂಸ್ಟರ್ ಶಾಟ್ ನೀಡಲಾಗುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದ ಬಳಿಕ ಒಂದು ಹೊಸ ಅಡ್ಡಪರಿಣಾಮ ಕೆಲವರಲ್ಲಿ ಕಂಡುಬಂದಿದೆ. ಈ ಹೊಸ ಲಕ್ಷಣವು ಈ ಮೊದಲ ಎರಡು ಡೋಸ್ಗಳ ಅವಧಿಯಲ್ಲಿ ಇರಲಿಲ್ಲ ಎಂದು ತಿಳಿಸಲಾಗಿದೆ.
Updated on:Feb 07, 2022 | 12:51 PM

dont get infected in self to omicron virus its too dangours said by experts

Union government may soon reduce the gap between Covid Vaccine Second Dose and Booster Dose

BBMP has decided to penalize those who have not masked in Bangalore

ತಜ್ಞರು ಹೇಳುವಂತೆ, ಹೀಗೆ ಲಸಿಕೆ ಪಡೆದ ನಂತರ ಬಾಯಿಯಲ್ಲಿ ಮೆಟಾಲಿಕ್ ರುಚಿಯ ಅನುಭವ ಆದರೆ ಯಾವುದೇ ರೀತಿಯಿಂದ ಅದಕ್ಕೆ ಭಯಪಡಬೇಕಾಗಿಲ್ಲ. ಎಲ್ಲರಿಗೂ ಇದೇ ಅನುಭವ ಆಗುವುದಿಲ್ಲ. ಹಾಗೂ ಕೆಲವರಿಗೆ ಈ ಅನುಭವ ವೇಗವಾಗಿ ಮರೆಯಾಗುವುದಿಲ್ಲ. ಲಸಿಕೆ ಪಡೆದ ಕೆಲವು ದಿನಗಳ ವರೆಗೆ ಮೆಟಾಲಿಕ್ ರುಚಿಯು ನಿಮ್ಮಲ್ಲಿರಬಹುದು.

ಹೀಗೆ ಮೆಟಾಲಿಕ್ ರುಚಿಯ ಲಕ್ಷಣದ ಹಿಂದಿನ ಕಾರಣ ಏನು ಎಂದು ತಜ್ಞರು ಇನ್ನಷ್ಟೇ ಹುಡುಕಬೇಕಿದೆ. ಮೆಟಾಲಿಕ್ ರುಚಿಯನ್ನು ಗ್ರಹಿಸಬಲ್ಲ ಗ್ರಂಥಿ ಬಾಯಿಯಲ್ಲಿ ಇರುವುದಿಲ್ಲ. ಹಾಗೂ ಈ ಸ್ಥಿತಿಯು ಆಘಾತಕಾರಿ ಅಲ್ಲ. ಸಹಜವಾಗಿ ಇದು ಕೆಲವು ದಿನಗಳ ಬಳಿಕ ತನ್ನ ಪಾಡಿಗೆ ಮರೆಯಾಗುತ್ತದೆ. ಸೈನಸ್, ಬಾಯಿಗೆ ಸಂಬಂಧಿಸಿದ ಅನಾರೋಗ್ಯ, ಬಾಯಿ ಒಣಗುವಿಕೆ ಹಾಗೂ ಇತರ ಕೆಲವು ಲಕ್ಷಣಗಳಿಂದ ಈ ಸ್ಥಿತಿ ಎದುರಾಗಬಹುದು.
Published On - 12:49 pm, Mon, 7 February 22




