
ಲಾಸ್ ವೆಗಾಸ್ನ ಯುವ ಪ್ರೇಮಿಗಳು, ಹೊಸ ವರ್ಷದ ಸಂಭ್ರಮದಲ್ಲಿ ಚುಂಬಿಸಿದ್ದು ಹೀಗೆ

ಹೊಸ ವರ್ಷದ ಸೂರ್ಯೋದಯವಾಗುತ್ತಿದ್ದಂತೆ ಕಾಶಿಯ ಗಂಗೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಅಮೃತಸರದ ಸ್ವರ್ಣ ಮಂದಿರ ಹೊಸ ವರ್ಷದ ಸೂರ್ಯರಶ್ಮಿಯಲ್ಲಿ ಹೊಂಬಣ್ಣದಿಂದ ಕಂಗೊಳಿಸಿತು.

ಅಮೃತಸರದಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ವರ್ಷದ ಮೊದಲ ದಿನ ಆದರೇನು..? ತನ್ನ ಕಾಯಕದಲ್ಲಿ ಮುಳುಗಿರುವ ರಾಜಸ್ಥಾನದ ವೃದ್ಧ ಕಂಡಿದ್ದು ಹೀಗೆ.

ಅಖಿಲ ಭಾರತ ಅಖಾರಾ ಪರಿಷತ್ನ ಸಾಧುಗಳು ಹೊಸ ವರ್ಷದ ಮೊದಲ ದಿನ ಗಂಗಾ ಪೂಜೆ ಸಲ್ಲಿಸಿದರು.

ಶ್ರೀನಗರದಲ್ಲಿ ಉಗ್ರಗಾಮಿಗಳ ದಾಳಿಗೆ ಓರ್ವ ಅಕ್ಕಸಾಲಿಗ ಬಲಿಯಾಗಿದ್ದರು. ಈ ಘಟನೆ ಖಂಡಿಸಿ ಶಿವಸೇನಾ ಡೋಗ್ರಾ ಫ್ರಂಟ್ ಆ್ಯಕ್ಟಿವಿಸ್ಟ್ನ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟಿಸಿದರು.

ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಂಡಿದ್ದ ರೈತ ಗಲ್ತಾನ್ ಸಿಂಗ್ ಇಂದು ಮೃತಪಟ್ಟರು. ಮೃತದೇಹದ ಎದುರು ಸೇರಿದ್ದ ರೈತ ಚಳವಳಿಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಃ ಪ್ರಾರಂಭಗೊಂಡವು.

ಹೊಸ ವರ್ಷದ ಮೊದಲ ದಿನ ಜನಿಸಿದ ಮಕ್ಕಳು ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದವು.

ಜಬ್ಲಾಪುರದ ಬೇದಾಘಾಟ್ ಜಲಪಾತಕ್ಕೆ 2021ರ ಮೊದಲ ದಿನದಂದು ಸಾವಿರಾರು ಪ್ರವಾಸಿಗರು ಭೇಟಿಯಿತ್ತರು.

ಸಾಮಾಜಿಕ ಅಂತರ ಮರೆತು ಮಿರ್ಜಾಪುರದ ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿಯಿತ್ತ ಭಕ್ತರು

ಗೋರಖ್ಪುರದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಗುಂಪೊಂದು ಪ್ರಯತ್ನಿಸಿದ ಬಗೆ

ಬುದ್ಧ ಗಯಾದ ಮಹಾ ಬೋಧಿ ದೇವಸ್ಥಾನದಲ್ಲಿ ಬೌದ್ಧ ಬಿಕ್ಕುಗಳು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.
Published On - 8:02 pm, Fri, 1 January 21