Kannada News Photo gallery pictures caught the attention of Bangaloreans at the Earth Power Art exhibition bengaluru kannada news
ಬೆಂಗಳೂರು: ಅರ್ತ್ ಪವರ್ ಆರ್ಟ್ ಪ್ರದರ್ಶನದಲ್ಲಿ ಬೆಂಗಳೂರಿಗರ ಮನ ಸೆಳೆದ ನೂರಾರು ಬಗೆಯ ಚಿತ್ರಗಳು
ಸಿಲಿಕಾನ್ ಸಿಟಿಯಲ್ಲಿ ಅರ್ತ್ ಪವರ್ ಆರ್ಟ್ ಗಳ ಪ್ರದರ್ಶನ ನಡೆಯುತ್ತಿದ್ದು, ಸಿಲಿಕಾನ್ ಮಂದಿ ಆರ್ಟ್ ಶೋ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಈ ಆರ್ತ್ ಪವರ್ ಚಿತ್ರಗಳ ಪ್ರದರ್ಶನ ನಿನ್ನೆಯಿಂದ ಆರಂಭವಾಗಿದ್ದು, ಇನ್ನು ಒಂದು ತಿಂಗಳ ಕಾಲ ಇರಲಿದೆ. ಚಿತ್ರ ಪ್ರಿಯರು ಈ ಪ್ರದರ್ಶನಕ್ಕೆ ಹೋಗಬಹುದಾಗಿದೆ.
1 / 7
ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಅರ್ತ್ ಪವರ್ ಆರ್ಟ್ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಕಲ್ಲಿನಿಂದ ಮೂಡಿರುವ ಮುಗ್ದ ಮಗುವಿನ ಚಿತ್ರ, ಮರದ ತುಂಡಿನಲ್ಲಿ ಅರಳಿರುವ ಸುಂದರ ಪ್ರಕೃತಿ ಚಿತ್ರ, ಮಣ್ಣಿನಲ್ಲಿ ಮೂಡಿಬಂದ ಪುಟ್ಟ ಮಗುವಿನ ಮುಗ್ದತೆ ಸೇರಿದಂತೆ ನೂರಾರು ಫೋಟೋಗಳು ಜನರನ್ನು ಮೋಡಿ ಮಾಡಿವೆ.
2 / 7
ಪೆನ್ನಿನಿಂದ ಪೇಪರ್ ಮೇಲೆ ಚಿತ್ರ ಬಿಡುಸುವುದಕ್ಕೆ ಎಷ್ಟೋ ಜನರು ಕಷ್ಟ ಪಡ್ತಾರೆ. ಅಂತಹದ್ರಲ್ಲಿ ಸಿಲಿಕಾನ್ ಸಿಟಿಯ ಅಚ್ಚ ಕನ್ನಡಿಗ ಚಿತ್ರ ಕಾಲವಿದ ಜಾನ್ ದೇವರಾಜ್ ಅವರು ಕಲ್ಲಿನ ಮೇಲೆ, ಮರದ ತುಂಡುಗಳ ಮೇಲೆ, ಮಣ್ಣಿನಿಂದ, ಪೇಪರ್ ಮೇಲೆ, ಕಂಚಿನ ಮೇಲೆ ಸುಂದರವಾಗಿ ಅರ್ತ್ ಪವರ್ ಆರ್ಟ್ ಚಿತ್ರಗಳನ್ನ ಬಿಡಿಸಿದ್ದು, ಒಂದೊಂದು ಚಿತ್ರಗಳು ಕೂಡ ನೂರೆಂಟ್ ಸಂದೇಶಗಳನ್ನ ಸಾರುತ್ತಿವೆ.
3 / 7
ಆರ್ತ್ ಆರ್ಟ್ ಚಿತ್ರಗಳ ಪ್ರದರ್ಶನವನ್ನ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿದ್ದು, ನೋಡುಗರನ್ನ ಸೆಳೆಯುತ್ತಿದೆ. ಈ ಆರ್ತ್ ಪವರ್ ಚಿತ್ರಗಳ ಪ್ರದರ್ಶನಕ್ಕೂ, ಬೇರೆ ಚಿತ್ರಗಳ ಪ್ರದರ್ಶನಕ್ಕೂ ವಿಶೇಷತೆಗಳಿವೆ.
4 / 7
ಕಾಲಾವಿದ ಜಾನ್ ದೇವರಾಜ್ ಅವರ ಪ್ರತಿಯೊಂದು ಆರ್ತ್ ಪವರ್ ಚಿತ್ರಗಳು ಬ್ರೌನಿ ಬಣ್ಣದ ಚಿತ್ರಗಳಾಗಿವೆ. ಯಾಕಂದ್ರೆ ವಿದೇಶಿಗರು ನಮ್ಮ ಭಾರತದವರನ್ನ ಕಪ್ಪು ಬಣ್ಣದವರು ಅಂತ ಹಿಯ್ಯಾಳಿಸುತ್ತಿದ್ರು.
5 / 7
ನಾವು ಕಪ್ಪು ಬಣ್ಣದವರಲ್ಲ. ಬದಲಾಗಿ ಬ್ರೌನಿ ಬಣ್ಣವದವರು. ಬ್ರೌನಿ ಬಣ್ಣದವರಾದ್ರು ನಮ್ಮಲ್ಲಿ ನಮ್ಮದೇ ಆದಾ ಟ್ಯಾಲೆಂಟ್ ಗಳಿವೆ ಎಂಬುವುದನ್ನ ಪರಿಚಯಿಸುವ ನಿಟ್ಟಿನಿಂದ ಜಾನ್ ದೇವರಾಜ್ ಆರ್ತ್ ಪವರ್ ಆರ್ಟ್ ಗಳನ್ನು ಬಿಡಿಸುವುದಕ್ಕೆ ಆರಂಭಮಾಡಿದ್ರು.
6 / 7
ಇಲ್ಲಿಯವರೆಗೂ 67ಕ್ಕೂ ಹೆಚ್ಚು ಆರ್ತ್ ಚಿತ್ರಗಳನ್ಮ ಬಿಡಿಸಿದ್ದು, ಬುಕ್ ಆಫ್ ರೆಕಾರ್ಡ್ ನಲ್ಲಿಯು ದಾಖಲಾಗಿವೆ. ಇದಲ್ಲದೇ ಅರ್ತ್ ಪವರ್ ಆರ್ಟ್ ಗಳಲ್ಲಿ ವಿಶೇಷತೆಗಳನ್ನ ನೋಡಿದ ಜರನು ಬೆರಗಾಗುತ್ತಿದ್ದಾರೆ..
7 / 7
ಈ ಪ್ರದರ್ಶನದಲ್ಲಿ ಮದರ್ ತೆರೆಸ್ಸಾ, ಅಂಬೇಡ್ಕರ್ ಸಂವಿಧಾನ, ಹುಲಿ, ಅನಾಥ ಮಗುವಿನ ರೋಧನೆ, ಹೆಣ್ಣು ಮಕ್ಕಳ ಮನಸ್ಥಿತಿ, ತಾಯಿ ಹಾಗೂ ಮಗುವಿನ ನಡುವಿನ ಪ್ರೀತಿಯ ಚಿತ್ರಗಳು ನೋಡುಗರನ್ನ ಬೆರಗಾಗಿಸುವಂತೆ ಮಾಡುತ್ತಿವೆ.