AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ತಾತನಿಗೆ ರಾಖಿ ಕಟ್ಟಿ, ಕೆನ್ನೆಗೆ ಮುತ್ತು ನೀಡಿ ಸಂಭ್ರಮಿಸಿದ ಮಕ್ಕಳು

ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ಜೊತೆ ರಾಖಿ ಹಬ್ಬ ಆಚರಿಸಿಕೊಂಡಿದ್ದಾರೆ. ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಶಾಲಾ ಮಕ್ಕಳನ್ನು ಭೇಟಿಯಾದ ಪ್ರಧಾನಿ ಮೊದಿಯವರಿಗೆ ಕೈ ತುಂಬ ರಾಖಿ ಕಟ್ಟಿದ ಮಕ್ಕಳು ಮೋದಿ ತಾತಾ ನೀಡಿದ ಸ್ವೀಟ್ ತಿಂದು, ಸಂಭ್ರಮಪಟ್ಟರು. ಮಕ್ಕಳ ಜೊತೆ ಬೆರೆತು ಸಂಭ್ರಮಿಸಿದ ಪ್ರಧಾನಿ ಮೋದಿಯವರ ಅಪರೂಪದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಸುಷ್ಮಾ ಚಕ್ರೆ
|

Updated on: Aug 28, 2026 | 6:56 PM

Share
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ ಮಾರ್ಗದ ತಮ್ಮ ಅಧಿಕೃತ ನಿವಾಸದಲ್ಲಿ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಆ ಸಂಭ್ರಮಾಚರಣೆಯ ಫೋಟೋಗಳು ಇಲ್ಲಿವೆ.

1 / 10
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ ಅಧಿಕೃತ ನಿವಾಸವಾದ 7, ಲೋಕ ಕಲ್ಯಾಣ ಮಾರ್ಗದಲ್ಲಿ ನಡೆದ ರಕ್ಷಾಬಂಧನ ಆಚರಣೆಯ ಕ್ಷಣಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಶೇಷ ಸಂದರ್ಭದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

2 / 10
ಎಕ್ಸ್ ಜಾಲತಾಣದಲ್ಲಿ ಆಚರಣೆಯ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, "7, ಲೋಕ ಕಲ್ಯಾಣ ಮಾರ್ಗದಲ್ಲಿ ನಡೆದ ರಕ್ಷಾಬಂಧನ ಆಚರಣೆಯ ಕೆಲವು ನೆನಪಿನಲ್ಲಿ ಉಳಿಯುವ ಕ್ಷಣಗಳು. ಈ ಹಬ್ಬವು ಪ್ರೀತಿ ಮತ್ತು ಸೌಹಾರ್ದತೆಯ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಪ್ರತಿಯೊಬ್ಬರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ" ಎಂದು ಬರೆದುಕೊಂಡಿದ್ದಾರೆ.

3 / 10
ರಕ್ಷಾ ಬಂಧನದ ಆಚರಣೆಯ ಕ್ಷಣಗಳನ್ನು ಒಳಗೊಂಡ ಮತ್ತೊಂದು ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, "ಇಂದಿನ ರಕ್ಷಾಬಂಧನದ ಆಚರಣೆಯ ವೇಳೆ 'ಹೈಫೈವ್‌ಗಳು, ನಗು ಮತ್ತಷ್ಟು ಸಂತೋಷ'" ಎಂದು ಬರೆದುಕೊಂಡಿದ್ದಾರೆ.

4 / 10
ಪ್ರಧಾನಿ ಮೋದಿ ಅವರು ರಕ್ಷಾಬಂಧನ ಆಚರಣೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿವಾಸದಲ್ಲಿ ನಡೆದ ಪರಸ್ಪರ ಸಂವಾದ ಹಾಗೂ ಸಂಭ್ರಮದ ಕ್ಷಣಗಳ ಮಾಹಿತಿ ನೀಡಿದ್ದಾರೆ.

5 / 10
ಪುಟ್ಟ ಮಕ್ಕಳು ಮೋದಿ ತಾತನಿಗೆ ಪ್ರೀತಿಯಿಂದ ತಾವೇ ಸಿದ್ಧಪಡಿಸಿದ ವಿಶೇಷವಾದ ರಾಖಿ ಕಟ್ಟಿ ಸಂಭ್ರಮಿಸಿದರು. ಕೆಲವರು ಹಾಡು ಹಾಡಿ ರಂಜಿಸಿದರೆ ಇನ್ನು ಕೆಲವು ಮಕ್ಕಳು ಮೋದಿಯವರಿಗೆ ಹೈಫೈವ್ ನೀಡಿ ಫೋಟೋ ತೆಗೆಸಿಕೊಂಡರು.

6 / 10
ಮತ್ತಷ್ಟು ಪುಟಾಣಿ ಮಕ್ಕಳು ಮೋದಿಯವರ ಕೆನ್ನೆಗೆ ಮುತ್ತನ್ನಿಟ್ಟರು. ಮಣಿಕಟ್ಟಿನ ತುಂಬ ರಾಖಿ ಕಟ್ಟಿಸಿಕೊಂಡು ಮಕ್ಕಳ ಜೊತೆ ಮಕ್ಕಳಂತೆ ಸಂಭ್ರಮಿಸಿದ ಮೋದಿಯವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

7 / 10
ವಿವಿಧ ಶಾಲೆಗಳ ಸಣ್ಣ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿನಿಯರು ಪ್ರಧಾನಿ ಮೋದಿ ಅವರ ಮಣಿಕಟ್ಟಿಗೆ ಪ್ರೀತಿಯಿಂದ ರಾಖಿ ಕಟ್ಟಿ, ಸಿಹಿ ತಿನಿಸಿ ಶುಭಾಶಯ ಕೋರಿದರು. ಪ್ರಧಾನಿಯವರು ಮಕ್ಕಳೊಂದಿಗೆ ಮಾತುಕತೆ ನಡೆಸಿ, ಹೈ ಫೈವ್ ನೀಡುತ್ತಾ ಮತ್ತು ನಗುತ್ತಾ ಮೈಮರೆತು ಸಮಯ ಕಳೆದರು.

8 / 10
ಇದೇ ವೇಳೆ ದೇಶವಾಸಿಗಳಿಗೆ ಹಬ್ಬದ ಶುಭಾಶಯ ಕೋರಿದ ಪ್ರಧಾನಿಯವರು, ಈ ಹಬ್ಬವು ಸಾರುವ ಪ್ರೀತಿ, ವಾತ್ಸಲ್ಯ ಹಾಗೂ ಪರಸ್ಪರ ನಂಬಿಕೆಯ ಬಂಧವು ಎಂದೆಂದಿಗೂ ಮುರಿಯಲಾಗದಂತೆ ಉಳಿಯಲಿ ಎಂದು ಹಾರೈಸಿದರು.

9 / 10
ಎಕ್ಸ್‌ನಲ್ಲಿ ಬರೆದುಕೊಂಡ ಪ್ರಧಾನಿ ಮೋದಿ, "ರಕ್ಷಾಬಂಧನದ ಪವಿತ್ರ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಈ ಪವಿತ್ರ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ನಂಬಿಕೆಯ ಬಂಧವು ಎಂದೆಂದಿಗೂ ಅಖಂಡವಾಗಿ ಉಳಿಯಲಿ ಎಂಬುದೇ ನನ್ನ ಹೃತ್ಪೂರ್ವಕ ಪ್ರಾರ್ಥನೆ" ಎಂದಿದ್ದಾರೆ.

10 / 10
Follow Us