- Kannada News Photo gallery PM Modi in Shahdol PM Modi visits Pakaria, interacts with people from tribal communities Check out the photos here
PM Modi in Shahdol: ಪಕಾರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ದೊರೆಯಿತು ಬುಡಕಟ್ಟು ಶೈಲಿಯ ಸ್ವಾಗತ; ಇಲ್ಲಿದೆ ಫೋಟೋಗಳು
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ಈ ವೇಳೆ ಬುಡಕಟ್ಟು ಸಮುದಾಯದ ಮುಖಂಡರು ಮತ್ತು ಮಕ್ಕಳೊಂದಿಗೆ ಕಲೆ ಕಾಲ ಕಳೆದು ಸಂವಾದ ನಡೆಸಿದರು.
Updated on: Jul 01, 2023 | 11:00 PM

ಮಧ್ಯಪ್ರದೇಶದ ಶಹದೋಲ್‌ನ ಪಕಾರಿಯಾ ಗ್ರಾಮಕ್ಕೆ ಇಂದು (ಜುಲೈ 1) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಡಕಟ್ಟು ಶೈಲಿಯಲ್ಲಿ ಸ್ವಾಗತಿಸಲಾಯಿತು. ನಂತರ ಬುಡಕಟ್ಟು ಸಮುದಾಯದ ಜನರು ಆಯೋಜಿಸಿದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಬುಡಕಟ್ಟು ನೃತ್ಯ ಪ್ರಸ್ತುತಪಡಿಸಲಾಯಿತು. ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಜನರು ನೃತ್ಯ ಮಾಡಿದರು.

ತಮಗೆ ಮೀಸಲಿಟ್ಟ ಆಸನದ ಮೇಲೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಜನಾಂಗದ ನೃತ್ಯವನ್ನು ವೀಕ್ಷಿಸಿದರು.

ನಂತರ ಬುಡಕಟ್ಟು ಸಮುದಾಯದ ಮುಖಂಡರು, ಸ್ವ-ಸಹಾಯ ಗುಂಪುಗಳ ಮುಖಂಡರು, ವಿವಿಧ ಸಮಿತಿಗಳು ಮತ್ತು ಗ್ರಾಮೀಣ ಫುಟ್‌ಬಾಲ್ ಕ್ಲಬ್‌ಗಳ ನಾಯಕರೊಂದಿಗೆ ಮಾತುಕತೆ ನಡೆಸಿದರು.

ರಾಜ್ಯದಲ್ಲಿ ಹೆಸರು ಗಳಿಸಿರುವ ಸ್ವ-ಸಹಾಯ ಗುಂಪುಗಳ ಮಹಿಳೆಯರು ಮತ್ತು ಫುಟ್‌ಬಾಲ್ ಆಟಗಾರರನ್ನು ಮೋದಿ ಭೇಟಿಯಾಗಿ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿಯವರು ಬುಡಕಟ್ಟು ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಪಂಚಾಯತ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿದರು. ಈ ಸಮಯದಲ್ಲಿ, ವಿಂಧ್ಯ ಪ್ರದೇಶದ ಪ್ರಮುಖ ಬುಡಕಟ್ಟು ನಾಯಕರು ಕೂಡ ಪಾಲ್ಗೊಂಡಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಸ್ವ-ಸಹಾಯ ಗುಂಪುಗಳ ಮಹಿಳೆಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಸಂವಾದ ನಡೆಸಲು ಆಗಮಿಸಿದ್ದರು. ಪ್ರಧಾನಿ ಕೂಡ ಜನರ ನಡುವೆ ಕುಳಿತುಕೊಂಡು ಜನರ ಹೋರಾಟದ ಕಥೆಗಳನ್ನೂ ಆಲಿಸಿದರು.

ಪಕಾರಿಯಾ ಗ್ರಾಮದಲ್ಲಿ ಮೋದಿ ಅವರನ್ನು ಮಕ್ಕಳು ಕೂಡ ಭೇಟಿಯಾದರು. ಮಕ್ಕಳ ಯೋಗಕ್ಷೇಮ ವಿಚಾರಿಸಿ ಮೋದಿ ಮಕ್ಕಳ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದರು. ಮೋದಿ ಜೊತೆಗೆ ಮಾತನಾಡಿದ ನಂತರ ಹಿರಿಯರು ಮಾತ್ರವಲ್ಲದೆ ಮಕ್ಕಳು ಕೂಡ ಸಂತಸಗೊಂಡರು.









