
ಲೋಕಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕಡಲನಗರಿ ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಯುವ ಕಲಾವಿದರೊಬ್ಬರು ಬಿಡಿಸಿದ ತಮ್ಮ ಫೋಟೋವನ್ನು ಪ್ರಧಾನಿ ಮೋದಿ ಪಡೆದುಕೊಂಡಿದ್ದಾರೆ.

ನಿನ್ನೆ ಮಂಗಳೂರಿಗೆ ಆಮಿಸಿದ್ದ ಪ್ರಧಾನಿ ಮೋದಿಗೆ ಕೊಡಲೆಂದೇ ತೊಕ್ಕೊಟ್ಟು ನಿವಾಸಿ ಯುವ ಕಲಾವಿದ ಕಿರಣ್ ಎಂಬುವವರು ಚಿತ್ರವನ್ನು ಬಿಡಿಸಿದ್ದಾರೆ.

20X24 ಫ್ರೇಮ್ನಲ್ಲಿ ಪ್ರಧಾನಿ ಮೋದಿಯವರ ಆಯಿಲ್ ಪೇಂಟ್ ಚಿತ್ರವನ್ನು ಬಿಡಿಸಿದ್ದು, ರೋಡ್ ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದ್ದಾರೆ.

ಈ ವೇಳೆ ಚಿತ್ರವನ್ನು ನೋಡಿ ಮೆಚ್ಚಿಕೊಂಡ ಪ್ರಧಾನಿ ಮೋದಿ ನೀಡುವಂತೆ ಹೇಳಿದ್ದಾರೆ.

ಎಸ್ಪಿಜಿ ಅಧಿಕಾರಿಗಳ ಬಳಿ ಫೋಟೋ ಪಡೆಯುವಂತೆ ಮೋದಿ ಸೂಚನೆ ನೀಡಿದ್ದು, ಅತ್ತ ಪ್ರಧಾನಿ ಫೋಟೋ ಸ್ವೀಕರಿಸಿದಕ್ಕೆ ಕಲಾವಿದ ಕಿರಣ್ ಖುಷಿ ವ್ಯಕ್ತಪಡಿಸಿದ್ದಾರೆ.