- Kannada News Photo gallery PM Modi Seeks Blessings From His Mother In Gandhinagar Ahead Of Gujarat 2nd Phase Polling
ಚಿತ್ರಗಳು: ಗುಜರಾತ್ 2ನೇ ಹಂತದ ಚುನಾವಣೆ ಮತದಾನಕ್ಕೂ ಮುನ್ನ ಮನೆಗೆ ಬಂದು ತಾಯಿ ಆಶೀರ್ವಾದ ಪಡೆದ ಮೋದಿ
ನಾಳೆ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಂಧಿನಗರಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರು, ತಮ್ಮ ತಾಯಿಯ ಆಶೀರ್ವಾದ ಪಡೆದರು.
Updated on:Dec 04, 2022 | 8:40 PM

ಗುಜರಾತ್ ಚುನಾವಣೆಯ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿದರು.

ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿಸೆಂಬರ್ 06) ತಮ್ಮ ನಿವಾಸಕ್ಕೆ ಆಗಮಿಸಿ ತಾಯಿ ಹೀರಾಬೆನ್ ಭೇಟಿ ಮಾಡಿದರು.

ಇದೇ ವೇಳೆ ಮೋದಿ ಅವರು ತಾಯಿ ಹೀರಾಬೆನ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡರು

ಟೀ ಸೇವಿಸುತ್ತ ತಾಯಿ ಜೊತೆ ಕುಳಿತು ಸಮಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ ಅವರು ಕಳೆದ ಜೂನ್ 18 ರಂದು ತಾಯಿ ಹೀರಾಬೆನ್ ಅವರ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿದ್ದರು.ಅದಾದ ಬಳಿಕ ಇದೀಗ ಬರೋಬ್ಬರಿ ಐದು ತಿಂಗಳು ನಂತರ ಮನೆಗೆ ಬಂದಿದ್ದಾರೆ.

ಇನ್ನು ಮೋದಿ ಅಹಮದಾಬಾದ್‌ನ ಸಬರಮತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದು, ನಾಳೆ(ಡಿ.5) ತಾಯಿ ಜೊತೆ ಮತಚಲಾಯಿಸಲಿದ್ದಾರೆ.

ತಾಯಿ ಆಶೀರ್ವಾದ ಪಡೆದುಕೊಂಡ ಬಳಿಕ ಮೋದಿ ಗಾಂಧಿನಗರದಲ್ಲಿ ಪಕ್ಷದ ಪ್ರಮುಖ ನಾಯಕರ ಸಭೆಗೆ ತೆರಳಿದರು.
Published On - 8:29 pm, Sun, 4 December 22




