- Kannada News Photo gallery Prime Minister Narendra Modi feeds cows at his residence, on the occasion of Makar Sankranti
ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವುಗಳಿಗೆ ಆಹಾರ ನೀಡಿದ ಮೋದಿ
ಮಕರ ಸಂಕ್ರಾಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಗೋವುಗಳಿಗೆ ಆಹಾರ ನೀಡಿದ್ದಾರೆ. ಹಬ್ಬದ ಶುಭಾಶಯಗಳನ್ನು ತಿಳಿಸಿದ ಮೋದಿಯವರು ಎಲ್ಲಾ ನಾಗರಿಕರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯ ನಿರಂತರ ಹರಿವನ್ನು ಹಾರೈಸಿದರು.
Updated on:Jan 14, 2024 | 6:29 PM

ಭಾನುವಾರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಗೋವುಗಳಿಗೆ ಆಹಾರ ನೀಡಿದರು. ಎಎನ್‌ಐ ಸುದ್ದಿಸಂಸ್ಥೆ ಹಂಚಿಕೊಂಡ ಚಿತ್ರಗಳಲ್ಲಿ, ಪ್ರಧಾನಿ ಮೋದಿ ಹಲವಾರು ಹಸುಗಳಿಗೆ ಆಹಾರವನ್ನು ನೀಡುತ್ತಿರುವುದನ್ನು ಕಾಣಬಹುದು.

ನವದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್ ಮುರುಗನ್ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಅವರು ಪೊಂಗಲ್ ಆಚರಿಸಿದರು.

ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದು, ತಮಿಳುನಾಡಿನ ಪ್ರತಿಯೊಂದು ಮನೆಯಿಂದಲೂ ಹಬ್ಬದ ಸಂಭ್ರಮವನ್ನು ವೀಕ್ಷಿಸಬಹುದು ಎಂದು ಹೇಳಿದರು.

ಮೋದಿಯವರು ಎಲ್ಲಾ ನಾಗರಿಕರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯ ನಿರಂತರ ಹರಿವನ್ನು ಹಾರೈಸಿದರು.

ದೇಶದಲ್ಲಿ ನಡೆಯುತ್ತಿರುವ ಹಬ್ಬಕ್ಕೆ ಮೋದಿ ಅವರು ಎಲ್ಲಾ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಪೊಂಗಲ್ ಹಬ್ಬವು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಭಾವನೆಯನ್ನು ಬಿಂಬಿಸುತ್ತದೆ.ಈ ಏಕತೆಯ ಭಾವನೆಯು 2047 ರ 'ವಿಕಸಿತ್ ಭಾರತ'ಕ್ಕೆ ಬಲವನ್ನು ನೀಡುತ್ತದೆ," ಎಂದು ಪ್ರಧಾನಿ ಹೇಳಿದರು. ಈ ಏಕತೆಯ ಭಾವನೆಯು 2047 ರ ವೇಳೆಗೆ ವಿಕಸಿತ್ ಭಾರತವನ್ನು ನಿರ್ಮಿಸಲು ದೊಡ್ಡ ಶಕ್ತಿಯಾಗಿದೆ

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೊಂಗಲ್ ಹಬ್ಬದ ಈ ಶುಭ ಸಂದರ್ಭದಲ್ಲಿ ರಾಷ್ಟ್ರದ ಐಕ್ಯತೆಯನ್ನು ಬಲಪಡಿಸುವ ಸಂಕಲ್ಪಕ್ಕೆ ನಮ್ಮನ್ನು ನಾವು ಪುನಃ ಸಮರ್ಪಿಸಿಕೊಳ್ಳೋಣ ಎಂಬ ಕರೆ ನೀಡಿದ ಮೋದಿ

ಎಲ್ಲ ಹಬ್ಬಗಳೂ ಒಂದಲ್ಲ ಒಂದು ರೀತಿಯಲ್ಲಿ ಕೃಷಿಗೆ ಸಂಬಂಧಿಸಿವೆ ಎಂದು. ದೇಶದಲ್ಲಿ ಮೂರು ಕೋಟಿಗೂ ಹೆಚ್ಚು ರೈತರು ಶ್ರೀ ಅನ್ನ (ಸಿರಿ ಧಾನ್ಯಗಳು) ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಪ್ರಧಾನಿ

ನಾವು ಶ್ರೀ ಅನ್ನವನ್ನು ಪ್ರಚಾರ ಮಾಡಿದರೆ, ಈ ಮೂರು ಕೋಟಿ ರೈತರಿಗೆ ನೇರವಾಗಿ ಲಾಭವಾಗುತ್ತದೆ.

ಪೊಂಗಲ್ ತಮಿಳರು ಆಚರಿಸುವ ಸುಗ್ಗಿಯ ಹಬ್ಬ. ಸಮೃದ್ಧವಾದ ಸುಗ್ಗಿಗೆ ಕೊಡುಗೆ ನೀಡಲು ಸಹಾಯ ಮಾಡುವ ಸೂರ್ಯ, ಪ್ರಕೃತಿ ಮತ್ತು ವಿವಿಧ ಕೃಷಿ ಪ್ರಾಣಿಗಳಿಗೆ ಧನ್ಯವಾದ ಅರ್ಪಿಸುವ ಆಚರಣೆಯಾಗಿದೆ. ನಾಲ್ಕು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ಥಾಯ್ ಎಂಬ ತಮಿಳು ತಿಂಗಳ ಆರಂಭವನ್ನು ಸೂಚಿಸುತ್ತದೆ, ಇದನ್ನು ಮಂಗಳಕರ ತಿಂಗಳು ಎಂದು ಪರಿಗಣಿಸಲಾಗಿದೆ.
Published On - 6:28 pm, Sun, 14 January 24



















