ನಟಿ ಪ್ರಿಯಾಂಕಾ ಚೋಪ್ರಾ ಅವರು ಖಾಸಗಿ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದಾರೆ. ಕೆಲ ದಿನಗಳ ಕಾಲ ಅವರು ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಮುಂಬೈನಲ್ಲಿ ಕಳೆದ ಕ್ಷಣಗಳ ಫೋಟೋನ ಅವರು ಹಂಚಿಕೊಳ್ಳುತ್ತಿದ್ದಾರೆ.
ಪ್ರಿಯಾಂಕಾಗೆ ಮುಂಬೈ ನಗರದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಮುಂಬೈನಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಮಗಳು ಮಾಲ್ತಿಯನ್ನು ಕರೆದುಕೊಂಡು ಬಂದಿದ್ದಾರೆ. ಅವರು ದೇವಸ್ಥಾನದಲ್ಲಿ ಮಾಲ್ತಿಗೆ ದೇವರ ದರ್ಶನ ಮಾಡಿಸಿದ್ದಾರೆ.
ಪ್ರಿಯಾಂಕಾ ಅವರು ಮದುವೆ ಆಗಿ ವಿದೇಶಕ್ಕೆ ತೆರಳಿದರು. ಆದರೆ, ಅವರು ಭಾರತೀಯ ಸಂಪ್ರದಾಯ ಮರೆತಿಲ್ಲ. ವಿದೇಶದಲ್ಲೂ ಭಾರತೀಯ ಹಬ್ಬಗಳನ್ನು ಆಚರಿಸುತ್ತಾರೆ. ಈ ಬಗ್ಗೆ ಅನೇಕರಿಗೆ ಖುಷಿ ಇದೆ.
ಇತ್ತೀಚೆಗೆ ಆಟೋ ಬಳಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಫೋಟೋಶೂಟ್ ಮಾಡಿಸಿದ್ದರು.