Updated on: Jan 25, 2022 | 4:44 PM
ಬಯೋಬಬಲ್ ಸುರಕ್ಷತಾ ನಿಯಮಗಳೊಂದಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್ ಸೀಸನ್ 8 ಗೆ ಇದೀಗ ಕೊರೋನಾ ಕಾಟ ಶುರುವಾಗಿದೆ. ಈಗಾಗಲೇ ಎರಡು ತಂಡಗಳ ಆಟಗಾರರು ಕೊರೋನಾ ಸೋಂಕಿಗೆ ಒಳಗಾಗಿದ್ದು, ಹೀಗಾಗಿ ಮುಂದಿನ ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಹೊಸ ವೇಳಾಪಟ್ಟಿಯಂತೆ ಮಂಗಳವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಕೇವಲ 1 ಪಂದ್ಯ ಮಾತ್ರ ನಡೆಯಲಿದೆ. ಈ ಪಂದ್ಯಗಳು ರಾತ್ರಿ 7.30 ಕ್ಕೆ ಶುರುವಾಗಲಿದೆ. ಹಾಗೆಯೇ ಶನಿವಾರ ಮೂರು ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂದು ಕೂಡ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಬದಲಾಗಿ ಶನಿವಾರ ಮತ್ತು ಭಾನುವಾರ ತಲಾ ಪಂದ್ಯಗಳು ಮಾತ್ರ ನಡೆಯಲಿದೆ. ಅದರಂತೆ ಹೊಸ ವೇಳಾಪಟ್ಟಿ ಈ ಕೆಳಗಿನಂತಿವೆ.
ಜನವರಿ 25- ಹರ್ಯಾಣ ಸ್ಟೀಲರ್ಸ್ - ತೆಲುಗು ಟೈಟನ್ಸ್ ಜನವರಿ 26- ಯು ಮುಂಬಾ - ಬೆಂಗಳೂರು ಬುಲ್ಸ್
ಜನವರಿ 29- ಗುಜರಾತ್ ಜೈಂಟ್ಸ್ - ದಬಾಂಗ್ ಡೆಲ್ಲಿ ಜನವರಿ 29- ತೆಲುಗು ಟೈಟನ್ಸ್ - ಬೆಂಗಾಲ್ ವಾರಿಯರ್ಸ್
ಜನವರಿ 30- ಪಟ್ನಾ ಪೈರೇಟ್ಸ್ - ಜೈಪುರ್ ಪಿಂಕ್ ಪ್ಯಾಂಥರ್ಸ್ ಜನವರಿ 30- ತಮಿಳ್ ತಲೈವಾಸ್ - ಬೆಂಗಳೂರು ಬುಲ್ಸ್