ಭಾರತವು ಇಂದು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಮಿಲಿಟರಿ ಶೌರ್ಯ, ಸಂಸ್ಕೃತಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು ಪ್ರದರ್ಶಿಸುವ ದೆಹಲಿಯ ರಾಜಪಥ್‌ನಲ್ಲಿ ಐಕಾನಿಕ್ ಪರೇಡ್ ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಯಿತು. ಕೋವಿಡ್ -19 ಸಾಂಕ್ರಾಮಿಕದ ನಡುವೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಇದು ಸತತ ಎರಡನೇ ವರ್ಷವಾಗಿದೆ.
1 / 8
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ದೆಹಲಿಯಲ್ಲಿ ಸಂಭ್ರಮಾಚರಣೆ ಪ್ರಾರಂಭವಾಯಿತು. ಅಲ್ಲಿ ಅವರು ತಮ್ಮ ಪ್ರಾಣವನ್ನು ಅರ್ಪಿಸಿದವರಿಗೆ ಗೌರವ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ರಾಜಪಥದಲ್ಲಿ ಪರೇಡ್ ಆರಂಭವಾಗಿದೆ. ಕೋವಿಡ್ -19 ರ ದೃಷ್ಟಿಯಿಂದ, ಒಟ್ಟು 21 ಟೇಬಲ್‌ಆಕ್ಸ್‌ಗಳಲ್ಲಿ 12 ಅನ್ನು ಮಾತ್ರ ಪ್ರದರ್ಶಿಸಲಾಗುತ್ತದೆ.
2 / 8
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಿಂದ ನಿರ್ಗಮಿಸಿದರು.
3 / 8
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜಪಥಕ್ಕೆ ಆಗಮಿಸಿದರು.
4 / 8
ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ಅವರು ನವದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವ ಪರೇಡ್ ಅನ್ನು ಮುನ್ನಡೆಸಿದರು.
5 / 8
ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಬಾಬು ರಾಮ್ ಅವರು ಅಶೋಕ ಚಕ್ರವನ್ನು ಮರಣೋತ್ತರವಾಗಿ ಪ್ರದಾನ ಮಾಡಿಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅವರ ಪತ್ನಿ ರೀನಾ ರಾಣಿ ಮತ್ತು ಪುತ್ರ ಮಾಣಿಕ್ ಪ್ರಶಸ್ತಿ ಸ್ವೀಕರಿಸಿದರು.
6 / 8
ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನಿ ಸೇನೆಯು ಅಟ್ಟಾರಿ-ವಾಘಾ ಗಡಿಯಲ್ಲಿ ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭಾಶಯ ಕೋರಿದರು.
7 / 8
871 ಫೀಲ್ಡ್ ರೆಜಿಮೆಂಟ್‌ನ ಸೆರಿಮೋನಿಯಲ್ ಬ್ಯಾಟರಿಯಿಂದ21-ಗನ್ ಸೆಲ್ಯೂಟ್ ಪ್ರದರ್ಶಿಸಲಾಯಿತು.