ನಿಗಿ ನಿಗಿ ಕೆಂಡ ಕಾರುತ್ತಿರುವ ಮಧ್ಯ ರಾಜ್ಯಪಾಲರ ಜತೆ ಊಟ ಮಾಡಿದ ಡಿಕೆಶಿ

|

Updated on: Aug 28, 2024 | 4:15 PM

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇದು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ಹೋರಾಟ ಉಂಟಾಗುವ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಮಧ್ಯೆದ ಮುನಿಸಿಗೆ ಕಾರಣವಾಗಿದೆ. ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿದ್ದರಾಮಯ್ಯ, ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ಇದರ ಮಧ್ಯ ಡಿಕೆಶಿ ಶಿವಕುಮಾರ್​ ಅವರು ರಾಜ್ಯಪಾಲರ ಜೊತೆಗೆ ಭೋಜನ ಮಾಡಿದ್ದಾರೆ. ಇಬ್ಬರು ಆತ್ಮೀಯವಾಗಿ ಮಾತನಾಡುತ್ತ ಊಟ ಸವಿದ ಫೋಟೋಸ್​ ಇಲ್ಲಿವೆ ನೋಡಿ.

1 / 7
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು, ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.  ಈ ಹಿನ್ನೆಲೆಯಲ್ಲಿ ಸರ್ಕಾರ ವರ್ಸಸ್​ ರಾಜ್ಯಪಾಲ ನಡುವಿನ ಸಂಘರ್ಷ ಜೋರಾಗಿದೆ. ಇದರ ನಡುವೆ ಡಿಕೆ ಶಿವಕುಮಾರ್ ಇಂದು ಇದೇ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ಜೊತೆ ಆತ್ಮೀಯವಾಗಿ ಊಟ ಸವಿದಿದ್ದು, ಇದು ಹಲವರ ಅಚ್ಚರಿಗೆ ಕಾರಣವಾಗಿದೆ.

2 / 7
ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್  ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ  ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ  ಡಿಕೆ ಶಿವಕುಮಾರ್ ಭಾಗಿಯಾಗಿದ್ದರು.

3 / 7
ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್  ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮತ್ತು ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ಒಟ್ಟಿಗೆ ಕುಳಿತುಕೊಂಡು ಊಟ ಮಾಡಿದ್ದಾರೆ.

4 / 7
ಪ್ರಾಸಿಕ್ಯೂಷನ್​ ವಿಚಾರವಾಗಿ ರಾಜ್ಯಪಾಲರ ವಿರುದ್ಧ  ಡಿಕೆ ಶಿವಕುಮಾರ್ ಸಿಡಿದು ಕೆಂಡವಾಗಿದ್ದಾರೆ. ಆದ್ರೆ, ಕಾರ್ಯಕ್ರಮದಲ್ಲಿ ಇಬ್ಬರು ಆತ್ಮೀಯವಾಗಿ ನಗು ನಗುತ್ತಲೇ ಮಾತನಾಡುತ್ತ ಭೋಜನ ಸವಿದರು.

5 / 7
ಆಗಸ್ಟ್ 31ರಂದು ರಾಜಭವನ ಚಲೋಗೆ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಹೀಗೆ ರಾಜ್ಯಪಾಲರ ವಿರುದ್ಧ ನಿಗಿ ನಿಗಿ ಕೆಂಡಕಾರುತ್ತಿರುವವರೇ ಪಕ್ಕದಲ್ಲಿ ಕುಳಿತು ಅದು ಹೇಗೆ ಊಟ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

6 / 7
ಹೊರಗೆ ರಾಜ್ಯಪಾಲರ ವಿರುದ್ಧ ಕೆಂಡಕಾರಿರುವ ಡಿಕೆ ಶಿವಕುಮಾರ್ , ಇಂದು ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿ ರಾಜ್ಯಪಾಲರ ಜೊತೆ ಕೂತು ಊಟ ಮಾಡಿದರು. ಈ ವೇಳೆ ಇಬ್ಬರು ನಗುಮುಗದಲ್ಲೇ ಕುಶಲೋಪರಿ ವಿಚಾರಿಸಿದರು.

7 / 7
ಮುಡಾ ಹಗರಣದ ಪ್ರಾಸಿಕ್ಯೂಷನ್​ ಅನುಮತಿ ನೀಡಿರುವ ಮಧ್ಯ ಸರ್ಕಾರದ 11 ಬಿಲ್​ಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇದರಿಂದ ಇಡೀ ಸರ್ಕಾರವೇ ರಾಜ್ಯಪಾಲರ ನಡೆಗೆ ತೀವ್ರವಾಗಿ ವಿರೋಧಿಸುತ್ತಿದೆ. ಆದ್ರೆ, ಕಾರ್ಯಕ್ರಮದಲ್ಲಿ ಇವೆಲ್ಲವೂಗಳನ್ನು ಮರೆತು ಡಿಕೆಶಿ, ಥಾವರ್ ಚೆಂದ ಗೆಹ್ಲೋಟ್​ ಖುಷಿ ಖುಷಿಯಲ್ಲಿ ಇರುವುದು ಕಾಣಿಸಿತು.

Published On - 4:09 pm, Wed, 28 August 24