ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸು: ದೇವರಿಗೊಂದು ಪತ್ರ

|

Updated on: Aug 06, 2024 | 4:02 PM

ಹಿಂದೂ ತೀರ್ಥಕ್ಷೇತ್ರವಾದ ನಂಜುಂಡೇಶ್ವರ ದೇವಸ್ಥಾನ ನಂಜನಗೂಡುನಲ್ಲಿದ್ದು, ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದೆ. ಇಂದು ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ. ಈ ವೇಳೆ ಹಲವಾರು ಭಕ್ತರು ದೇವರಿಗೆ ಸಾಕಷ್ಟು ಪತ್ರ ಬರೆದಿದ್ದು, ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರದ ಮೂಲಕ ಬೇಡಿಕೊಂಡಿದ್ದಾರೆ.

1 / 6
ನಂಜುಂಡೇಶ್ವರ ದೇವಸ್ಥಾನ, ಹಿಂದೂ ತೀರ್ಥಕ್ಷೇತ್ರವಾದ ಈ ದೇವಾಲಯ ನಂಜನಗೂಡುನಲ್ಲಿದ್ದು, ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದೆ . ಜೊತೆಗೆ ಇದು ಕಾವೇರಿ ನದಿಯ ಉಪನದಿಯಾದ ಕಪಿಲಾ ನದಿಯ ಬಲದಂಡೆಯಲ್ಲಿದೆ. ನಂಜನಗೂಡನ್ನು "ದಕ್ಷಿಣ ಕಾಶಿ" ಅಥವಾ "ದಕ್ಷಿಣದ ಕಾಶಿ" ಎಂದೂ ಕರೆಯುತ್ತಾರೆ. 

2 / 6
ಇಂದು ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ. ಈ ವೇಳೆ ಹಲವಾರು ಭಕ್ತರು ದೇವರಿಗೆ ಸಾಕಷ್ಟು ಪತ್ರ ಬರೆದಿದ್ದು, ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಪತ್ರದ ಮೂಲಕ ಬೇಡಿಕೊಂಡಿದ್ದಾರೆ.

3 / 6
ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ನಂಜುಡೇಶ್ವರ ದೇವಾಲಯಕ್ಕೆ ದುಡ್ಡಿನ ಜೊತೆಗೆ ಪತ್ರವನ್ನ ಸಹ ನಂಜುಂಡೇಶ್ವರನ ಭಕ್ತರು ಬರೆದು ಹಾಕಿದ್ದಾರೆ. ಅದರಲ್ಲೊಬ್ಬರು ‘ಪ್ರತಿ ತಿಂಗಳು ಕೋಟಿ ಕೋಟಿ ಹಣವನ್ನ ಭಕ್ತರು ನಿನ್ನ ಹುಂಡಿಯಲ್ಲಿ ಹಾಕುತ್ತಾರೆ. ಆದರೂ ಬಡಭಕ್ತರಿಗೆ ಯಾಕಿಲ್ಲ ವ್ಯವಸ್ಥೆ ಎಂದು ಬರೆದಿದ್ದಾರೆ.

4 / 6
ಅಷ್ಟೇ ಅಲ್ಲ, ನಂಜನಗೂಡಿನ ದೇವಸ್ಥಾನನದ ಬಳಿ ಬಡವರ ವಾಸ್ತವ್ಯಕ್ಕೆ ವ್ಯವಸ್ತೆ ಇಲ್ಲ, ಕಪಿಲಾ ನದಿಯ ದಡದಲ್ಲಿ ಬಟ್ಟೆ ಬದಲಾಯಿಸಲು ಜಾಗವಿಲ್ಲ. ಬಡ ಭಕ್ತರಿಗೆ ಸರಿಯಾದ ಪ್ರಸಾದವಿಲ್ಲ. ದಯವಿಟ್ಟು ಭಕ್ತರು ಹಾಕುವ ಹಣವನ್ನ ಮೂಲ ಸೌಕರ್ಯಕ್ಕೆ ಬಳಸಿ ಎಂದು ಬರೆದಿರುವ ಸಾಕಷ್ಟು ಪತ್ರಗಳು ಕಂಡುಬಂದಿದೆ.

5 / 6
ಇನ್ನು ಕನ್ನಡದಲ್ಲಿ ನಂಜು ಎಂದರೆ "ವಿಷ" ಎಂದರ್ಥ. ನಂಜುಂಡೇಶ್ವರ ಎಂಬ ಹೆಸರಿನಅರ್ಥ "ವಿಷವನ್ನು ಸೇವಿಸಿದ ದೇವರು. ಹೀಗಾಗಿ, ಈ ಊರಿಗೆ "ನಂಜನಗೂಡು" ಎಂಬ ಹೆಸರು ಬಂತು ಅಂದರೆ "ನಂಜುಂಡೇಶ್ವರ ದೇವರ ವಾಸಸ್ಥಾನ" ಎಂದರ್ಥ.

6 / 6
ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಉತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಜಾತ್ರೆಯಲ್ಲಿನ ಉತ್ಸವಗಳಲ್ಲಿ ರಥಬೀದಿ ಎಂಬ ಪಥದಲ್ಲಿ ಭಕ್ತರು ಎಳೆಯುವ ಐದು ವರ್ಣರಂಜಿತ ರಥಗಳು ಸೇರಿವೆ. ಒಂಬತ್ತು ಅಂತಸ್ತಿನ, 120 ಅಡಿ ಎತ್ತರದ ದೇವಾಲಯದ ಗೋಪುರವಿದೆ.