ಅಪ್ಪು ಭಾವಚಿತ್ರ ಹಿಡಿದು ಶಬರಿಮಲೆ ಯಾತ್ರೆ ಮಾಡಿದ ಅಭಿಮಾನಿಗಳು!
TV9 Web | Updated By: preethi shettigar
Updated on:
Dec 13, 2021 | 9:01 AM
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಯ್ಯಪ್ಪ ಸ್ವಾಮಿ ಬಳಿ ಬೇಡಿಕೊಳ್ಳುತ್ತಿದ್ದಾರೆ. ಜನರು ತೋರಿಸುವ ಈ ಪರಿ ಅಭಿಮಾನ ಕಂಡಾಗಲೆಲ್ಲ ಪುನೀತ್ ನೆನಪು ಮತ್ತೆ ಮತ್ತೆ ಕಾಡುತ್ತದೆ.
1 / 5
ನಟ ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಇಂದಿಗೂ ಹಲವು ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಏಕಾಏಕಿ ಹೃದಯಾಘಾತದಿಂದ ಮೃತಪಟ್ಟ ಅವರನ್ನು ಅಭಿಮಾನಿಗಳು ಮಾತ್ರ ತಮ್ಮಿಂದ ದೂರ ಮಾಡಿಲ್ಲ. ಇದಕ್ಕೆ ಸಾಕ್ಷಿ ಎನ್ನುವ ಹಾಗೆ ಅನೇಕರು ನಟ ಪುನೀತ್ ರಾಜ್ಕುಮಾರ್ ಅವರ ಭಾವ ಚಿತ್ರವನ್ನು ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡುತ್ತಿದ್ದಾರೆ.
2 / 5
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಆ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಯ್ಯಪ್ಪ ಸ್ವಾಮಿ ಬಳಿ ಬೇಡಿಕೊಳ್ಳುತ್ತಿದ್ದಾರೆ. ಜನರು ತೋರಿಸುವ ಈ ಪರಿ ಅಭಿಮಾನ ಕಂಡಾಗಲೆಲ್ಲ ಪುನೀತ್ ನೆನಪು ಮತ್ತೆ ಮತ್ತೆ ಕಾಡುತ್ತದೆ.
3 / 5
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕೃಷ್ಣಪುರ ಗ್ರಾಮದ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ. ಈ ವೇಳೆ ಇರುಮುಡಿಯ ಜತೆ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಹಿಡಿದು ಸಾಗಿದ್ದಾರೆ.
4 / 5
ಒಟ್ಟು 49 ಮಂದಿ ಅಯ್ಯಪ್ಪ ಭಕ್ತರು ಯಾತ್ರೆಗೆ ತೆರಳಿದ್ದು, ತಾವು ಪ್ರಯಾಣಿಸುವ ಮಿನಿ ಬಸ್ಗೂ ಅಪ್ಪು ಭಾವ ಚಿತ್ರ ಕಟ್ಟಿದ್ದಾರೆ.
5 / 5
ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ತಲೆ ಮೇಲೆ ಭಕ್ತಿಭಾವದಿಂದ ಹೊತ್ತುಕೊಂಡು ಪಂಪಾದಿಂದ ಯಾತ್ರೆ ಮಾಡಿದ್ದಾರೆ. 18 ಮೆಟ್ಟಿಲುಗಳನ್ನು ಹತ್ತುವಾಗಲು ಇರುಮುಡಿ ಜೊತೆ ಅಪ್ಪು ಭಾವಚಿತ್ರವನ್ನು ಹಿಡಿದುಕೊಂಡಿದ್ದಾರೆ.