Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ

| Updated By: ಮದನ್​ ಕುಮಾರ್​

Updated on: Oct 27, 2022 | 6:47 PM

Puneeth Rajkumar | Amoghavarsha: ‘ಗಂಧದ ಗುಡಿ’ ಯಶಸ್ವಿ ಆಗಲಿ ಎಂದು ನಿರ್ದೇಶಕ ಅಮೋಘವರ್ಷ ಪೂಜೆ ಸಲ್ಲಿಸಿದ್ದಾರೆ. ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಪ್ರಾರ್ಥನೆ ಮಾಡಿಕೊಂಡಿದ್ದಾರೆ.

1 / 5
ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ರಾಜ್ಯಾದ್ಯಂತ 225ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಸಾಕ್ಷ್ಯಚಿತ್ರ ರಿಲೀಸ್​ ಆಗುತ್ತಿದೆ.

2 / 5
ಈ ಡಾಕ್ಯುಮೆಂಟರಿಗೆ ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಪಿಆರ್​ಕೆ ಪ್ರೊಡಕ್ಷನ್ಸ್​ ಮೂಲಕ ಇದು ನಿರ್ಮಾಣ ಆಗಿದೆ. ಕರುನಾಡಿನ ಕಾಡುಗಳನ್ನು ಸಂಚರಿಸಿ ಅಪ್ಪು ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

3 / 5
ಗುರುವಾರ (ಅ.27) ರಾತ್ರಿಯೇ ಹಲವು ಕಡೆಗಳಲ್ಲಿ ‘ಗಂಧದ ಗುಡಿ’ ಪ್ರೀಮಿಯರ್​ ಶೋ ಆಯೋಜನೆಗೊಂಡಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಸಾಕಷ್ಟು ಅಭಿಮಾನಿಗಳು ಕೂಡ ವೀಕ್ಷಿಸಲಿದ್ದಾರೆ.

4 / 5
‘ಗಂಧದ ಗುಡಿ’ ಯಶಸ್ವಿ ಆಗಲಿ ಎಂದು ನಿರ್ದೇಶಕ ಅಮೋಘವರ್ಷ ಅವರು ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಕುಟುಂಬದವರು ಸಾಥ್​ ನೀಡಿದರು.

5 / 5
ದಾಖಲೆ ಪ್ರಮಾಣದಲ್ಲಿ ‘ಗಂಧದ ಗುಡಿ’ ಶೋ ಆಯೋಜನೆಗೊಂಡಿದೆ. ರಾಜ್ಯಾದ್ಯಂತ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು ಈ ಸಾಕ್ಷ್ಯಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ. ವಿದೇಶದಲ್ಲೂ ‘ಗಂಧದ ಗುಡಿ’ ತೆರೆಕಾಣುತ್ತಿದೆ.