Updated on: Aug 19, 2022 | 8:09 AM
ಹಾಡುಗಳ ಮೂಲಕ ಸದ್ದು ಮಾಡಿರುವ ‘ಲವ್ 360’ ಸಿನಿಮಾ ಇಂದು (ಆಗಸ್ಟ್ 19) ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಆಗಸ್ಟ್ 18ರ ಸಂಜೆ ನಡೆದ ಪ್ರೀಮಿಯರ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
‘ಲವ್ ಮಾಕ್ಟೇಲ್’ ಖ್ಯಾತಿಯ ನಟಿ ರಚನಾ ಇಂದರ್ ಅವರು ‘ಲವ್ 360’ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಭಿನ್ನವಾದ ಒಂದು ಪಾತ್ರವನ್ನು ಅವರು ಮಾಡಿದ್ದಾರೆ.
ಮೊದಲ ಸಿನಿಮಾಗಾಗಿ ನಟ ಪ್ರವೀಣ್ ಅವರು ಸಕಲ ತಯಾರಿ ಮಾಡಿಕೊಂಡು ನಟಿಸಿದ್ದಾರೆ. ಒಂದು ಕ್ಯೂಟ್ ಲವ್ ಸ್ಟೋರಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಕೂಡ ಈ ಸಿನಿಮಾದಲ್ಲಿದೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿದ್ ಶ್ರೀರಾಮ್ ಹಾಡಿರುವ ‘ಜಗವೇ ನೀನು ಗೆಳೆತಿಯೇ..’ ಹಾಡು ಸೂಪರ್ ಹಿಟ್ ಆಗಿದೆ.
ಡ್ಯಾನಿ ಕುಟ್ಟಪ್ಪ, ಗೋಪಾಲ್ ದೇಶಪಾಂಡೆ, ಕಾವ್ಯಾ ಶಾಸ್ತ್ರಿ, ಮಹಂತೇಶ್, ಸುಕನ್ಯಾ ಗಿರೀಶ್, ಸುಜಿತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.