ಆ್ಯನಿವರ್ಸರಿ ದಿನವೇ ಅಭಿಮಾನಿಗಳ ಜೊತೆ ಗುಡ್ನ್ಯೂಸ್ ಹಂಚಿಕೊಂಡ ನಟಿ ಕಾವ್ಯಾ ಗೌಡ
Kavya Gowda: ಕಾವ್ಯಾ ಗೌಡ ಹಾಗೂ ಸೋಮಶೇಖರ್ ದಂಪತಿ ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ. 2024ರಲ್ಲಿ ಮಗು ಜನಿಸಲಿದೆ ಎಂದು ಕಾವ್ಯಾ ಗೌಡ ಅವರು ಹೇಳಿಕೊಂಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
1 / 6
‘ರಾಧಾ ರಮಣ’ ಧಾರಾವಾಹಿ ಮೂಲಕ ನಟಿ ಕಾವ್ಯಾ ಗೌಡ ಚಿರಪರಿಚಿತರಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅವರು ಸಿಂಪಲ್ ಆಗಿ ಮದುವೆ ಆಗಿದ್ದರು. ಈಗ ಅವರು ಅಭಿಮಾನಿಗಳ ಬಳಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
2 / 6
ಕಾವ್ಯಾ ಗೌಡ ಹಾಗೂ ಸೋಮಶೇಖರ್ ದಂಪತಿ ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ. 2024ರಲ್ಲಿ ಮಗು ಜನಿಸಲಿದೆ ಎಂದು ಕಾವ್ಯಾ ಗೌಡ ಅವರು ಹೇಳಿಕೊಂಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
3 / 6
ಕಾವ್ಯಾ ಹಾಗೂ ಸೋಮಶೇಖರ್ ಅವರು 2021ರ ಡಿಸೆಂಬರ್ 2ರಂದು ಮದುವೆ ಆದರು. ವಿವಾಹ ಆದ ಎರಡು ವರ್ಷಗಳ ಬಳಿಕ ಅವರ ಕಡೆಯಿಂದ ಗುಡ್ನ್ಯೂಸ್ ಸಿಕ್ಕಿದೆ. ನಟಿಯ ಬೇಬಿಬಂಪ್ ಫೋಟೋಶೂಟ್ ಗಮನ ಸೆಳೆದಿದೆ.
4 / 6
ಕಾವ್ಯಾ ಗೌಡ ಅವರಿಗೆ ಅನುಪಮಾ ಗೌಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ. ಆ್ಯನಿವರ್ಸರಿ ದಿನವೇ ಈ ನ್ಯೂಸ್ ಹೊರ ಬಿದ್ದಿರೋದು ವಿಶೇಷ.
5 / 6
2015ರಲ್ಲಿ ಪ್ರಸಾರ ಕಂಡ ‘ಶುಭ ವಿವಾಹ’ ಧಾರಾವಾಹಿ ಮೂಲಕ ಕಾವ್ಯಾ ಗೌಡ ಕಿರುತೆರೆ ಪಯಣ ಆರಂಭಿಸಿದರು. ನಂತರ ‘ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ‘ಗಾಂಧಾರಿ’ ಧಾರಾವಾಹಿಯಲ್ಲೂ ಕಾವ್ಯಾ ಗೌಡ ಬಣ್ಣ ಹಚ್ಚಿದ್ದಾರೆ.
6 / 6
2018ರಲ್ಲಿ ‘ಬಕಾಸುರ’ ಸಿನಿಮಾ ತೆರೆಕಂಡಿತು. ಈ ಚಿತ್ರದ ಮೂಲಕ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟರು. ಸದ್ಯ ಅವರು ಹಿರಿತೆರೆ ಹಾಗೂ ಕಿರುತೆರೆಯಿಂದ ದೂರವೇ ಇದ್ದಾರೆ. ಈಗ ತಾಯಿ ಆಗುವ ಖುಷಿಯಲ್ಲಿದ್ದಾರೆ.
Published On - 12:20 pm, Sat, 2 December 23