- Kannada News Photo gallery Cricket photos Suryakumar Yadav didn't talk much in post match presentation after winning 4th T20I and series
IND vs AUS 4th T20I: ಸರಣಿ ವಶಪಡಿಸಿದ ಬಳಿಕ ಪೋಸ್ಟ್ ಮ್ಯಾಚ್ನಲ್ಲಿ ಹೆಚ್ಚು ಮಾತನಾಡದ ಸೂರ್ಯಕುಮಾರ್: ಏನಂದ್ರು ನೋಡಿ
Suryakumar Yadav in post match presentation: ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿತು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಏನು ಹೇಳಿದರು ನೋಡಿ.
Updated on: Dec 02, 2023 | 6:57 AM

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1 ಅಂಕಗಳ ಅಂತರದಿಂದ ವಶಪಡಿಸಿಕೊಂಡಿದೆ. ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ 20 ರನ್ಗಳ ಜಯ ಸಾಧಿಸಿತು.

ಬ್ಯಾಟಿಂಗ್ಗೆ ಕಠಿಣವಾದ ಪಿಚ್ನಲ್ಲಿ ರನ್ ಕಲೆಹಾಕಲು ಉಭಯ ತಂಡಗಳ ಬ್ಯಾಟರ್ಗಳು ಪರದಾಡಿದರು. ಭಾರತ 20 ಓವರ್ಗಳಲ್ಲಿ 174 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ 154 ರನ್ ಗಳಿಸಿತಷ್ಟೆ. ಅಕ್ಷರ್ ಪಟೇಲ್ ಪ್ರಮುಖ 3 ವಿಕೆಟ್ ಕಿತ್ತರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್ ಏನು ಹೇಳಿದ್ದಾರೆ ನೋಡಿ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಟಾಸ್ ಒಂದು ಹೊರತುಪಡಿಸಿ, ಉಳಿದ ಎಲ್ಲವೂ ನಾವು ಅಂದುಕೊಂಡಂತೆ ಸಾಗಿತು. ಹುಡುಗರು ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಅದು ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ನಾವು ಆಟಕ್ಕೆ ಮೊದಲು ಸಭೆಯಲ್ಲಿ ಮಾತನಾಡಿದ್ದೆವು. ಎಲ್ಲರಿಗೂ ನಿಮ್ಮ ಆಟ ನೀವು ಆಡಿ ಎಂದು ಹೇಳಿದ್ದೆವು. ನಾನು ಯಾವಾಗಲೂ ಅಕ್ಷರ್ ಪಟೇಲ್ ಅವರನ್ನು ಒತ್ತಡದ ಸಮಯಕ್ಕೆಂದು ಇರಿಸಲು ಇಷ್ಟಪಡುತ್ತೇನೆ, ಯಾಕೆಂದರೆ ಅವರು ಆ ಸಂದರ್ಭದಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಾರೆ, ಇಂದು ಕೂಡ ಅದೇರೀತಿ ನಡೆಯಿತು. ಡೆತ್ ಓವರ್‌ಗಳ ಸಮಯದಲ್ಲಿ ಯಾರ್ಕರ್ ಎಸೆಯುವುದು ನಮ್ಮ ಪ್ಲಾನ್ ಆಗಿತ್ತು. ಅದುಕೂಡ ಯಶಸ್ವಿ ಆಯಿತು ಎಂಬುದು ಸೂರ್ಯಕುಮಾರ್ ಯಾದವ್ ಮಾತು.

ಅಕ್ಷರ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 16 ರನ್ ನೀಡಿ 3 ವಿಕೆಟ್ ಪಡೆದರು. ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು. ಈ ಸಂದರ್ಭ ಮಾತನಾಡಿದ ಅವರು ನಾನು ಮನೆಯಲ್ಲಿದ್ದಾಗ ಬಹಳಷ್ಟು ಅಭ್ಯಾಸ. ಅದು ಇಂದು ಚೆನ್ನಾಗಿ ಕೆಲಸಕ್ಕೆ ಬಂದಿದೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ ಎಂದು ಹೇಳಿದ್ದಾರೆ.

ಸ್ಟಂಪ್-ಟು-ಸ್ಟಂಪ್ ಬೌಲಿಂಗ್ ಮಾಡಿದೆ. ಇಬ್ಬನಿ ಅಂಶವು ಪ್ರಮುಖವಾಗಿದೆ. ಆಕ್ರಮಣಕಾರಿಯಾಗಿ ಮತ್ತು ಮಾನಸಿಕವಾಗಿ ಬಲವಾಗಿರುವುದು ಮುಖ್ಯ. ಏಕೆಂದರೆ ಇದು ಟಿ20 ಮಾದರಿಯ ಕ್ರಿಕೆಟ್. ನೀವು ವಿಕೆಟ್‌ಗಳನ್ನು ತೆಗೆಯುವ ಮನೋಭಾವದೊಂದಿಗೆ ಹೋದಾಗ, ತುಂಬಾ ಸಹಕಾರಿ ಆಗುತ್ತದೆ ಎಂಬುದು ಅಕ್ಷರ್ ಪಟೇಲ್ ಮಾತು.

ಆಸ್ಟ್ರೇಲಿಯನ ನಾಯಕ ಮ್ಯಾಥ್ಯೂ ವೇಡ್ ಮಾತನಾಡಿ, ನಾವು ಸ್ಪಿನ್ ಅನ್ನು ಚೆನ್ನಾಗಿ ಆಡಲಿಲ್ಲ, ಮಧ್ಯದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು. ಬೌಲರ್ಗಳು ಒಳ್ಳೆಯ ಕೆಲಸ ಮಾಡಿದರು ಆದರೆ ದುರದೃಷ್ಟವಶಾತ್ ನಮಗೆ ಉತ್ತಮ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. T20 ವಿಶ್ವಕಪ್ ಇರುವ ಕಾರಣ ಈಗಾಗಲೇ ತಂಡದಲ್ಲಿ ರೂಪಿಸುವುದು ಅಗತ್ಯ ಎಂದು ಹೇಳಿದ್ದಾರೆ.



















