
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ. ಮಾರ್ಚ್ 11ರಂದು ತೆರೆ ಕಂಡಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಭಾಸ್ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದರು. ಆದರೆ ಸಾಮಾನ್ಯ ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ಕಟು ವಿಮರ್ಶೆ ಮಾಡಿದ್ದರು.

ಪ್ಯಾನ್ ಇಂಡಿಯಾ ಚಿತ್ರವಾದರೂ ದೇಶವಾರು ಗಳಿಕೆ ಗಮನಿಸಿದರೆ ಪ್ರದೇಶವಾರು ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ‘ರಾಧೆ ಶ್ಯಾಮ್’ ಉತ್ತಮವಾಗಿ ಗಳಿಕೆ ಮಾಡಿದೆ. ಆದರೆ ಹಿಂದಿ ಅವತರಣಿಕೆ ಸದ್ದು ಮಾಡುತ್ತಿಲ್ಲ.

ಚಿತ್ರತಂಡಕ್ಕೆ ಸಮಾಧಾನಕರ ಸಂಗತಿಯೆಂದರೆ ‘ರಾಧೆ ಶ್ಯಾಮ್’ ಒಟ್ಟಾರೆ ಗಳಿಕೆ ಎರಡೇ ದಿನದಲ್ಲಿ 100 ಕೋಟಿ ರೂ ದಾಟಿದೆ. ಭಾರತದಲ್ಲಿ 72 ಕೋಟಿ ರೂ ಗಳಿಸಿದೆ.

ಆದರೆ ಹಿಂದಿಯಲ್ಲಿ ಚಿತ್ರದ ಎರಡೂ ದಿನದ ಗಳಿಕೆ 9 ಕೋಟಿ ರೂ ದಾಟಿಲ್ಲ. ಈ ಹಿಂದೆ ‘ಸಾಹೊ’ ಮೊದಲ ದಿನವೇ 25 ಕೋಟಿ ರೂ ಗಳಿಸಿದೆ ಎನ್ನಲಾಗಿತ್ತು. ಅದಕ್ಕೆ ಹೋಲಿಸಿದರೆ ‘ರಾಧೆ ಶ್ಯಾಮ್’ ಗಳಿಕೆ ಗಣನೀಯವಾಗಿ ತಗ್ಗಿದೆ. ಮುಂದಿನ ದಿನಗಳಲ್ಲೂ ಉತ್ತರದ ಪ್ರೇಕ್ಷಕರು ‘ರಾಧೆ ಶ್ಯಾಮ್’ಗೆ ಒಲವು ತೋರುವುದು ಅನುಮಾನ ಎಂದು ವರದಿಗಳು ಹೇಳುತ್ತಿವೆ.
Published On - 6:12 pm, Sun, 13 March 22