
ರಾಧಿಕಾ ಪಂಡಿತ್ ನಟಿಸಿದ ಮೊದಲ ಸಿನಿಮಾ ‘ಮೊಗ್ಗಿನ ಮನಸು’ 2008ರಲ್ಲಿ ಸೂಪರ್ ಹಿಟ್ ಆಯಿತು. ಆ ಚಿತ್ರದ ಅಭಿನಯಕ್ಕೆ ರಾಧಿಕಾ ಪಂಡಿತ್ ಅವರು ಕರ್ನಾಟಕ ಸರ್ಕಾರ ನೀಡುವ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿ ಪಡೆದರು. ‘ಅತ್ಯುತ್ತಮ ನಟಿ ಫಿಲ್ಮ್ ಫೇರ್’ ಪ್ರಶಸ್ತಿ ಕೂಡ ಅವರಿಗೆ ಸಿಕ್ಕಿತು.

ರಾಧಿಕಾ ಪಂಡಿತ್ ವೃತ್ತಿಬದುಕಿನಲ್ಲಿ ‘ಕೃಷ್ಣನ್ ಲವ್ ಸ್ಟೋರಿ’ ಕೂಡ ಹಿಟ್ ಸಿನಿಮಾ. ಆ ಸಿನಿಮಾದ ನಟನೆಗೆ ಅವರು ಫಿಲ್ಮ್ ಫೇರ್, ಸುವರ್ಣ ಫಿಲ್ಮ್ ಅವಾರ್ಡ್ಸ್ ಹಾಗೂ ಉದಯ ಫಿಲ್ಮ್ ಅವಾರ್ಡ್ಸ್ನಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರು.

ನಟ ತರುಣ್ ಚಂದ್ರ ಜೊತೆ ರಾಧಿಕಾ ಪಂಡಿತ್ ಅಭಿನಯಿಸಿದ ಸಿನಿಮಾ ‘ಲವ್ ಗುರು’. ಈ ಚಿತ್ರ 2009ರಲ್ಲಿ ತೆರೆಕಂಡಿತು. ಈ ಸಿನಿಮಾದಲ್ಲಿನ ನಟನೆಗೆ ರಾಧಿಕಾ ಪಂಡಿತ್ ಅವರಿಗೆ ‘ಅತ್ಯುತ್ತಮ ನಟಿ’ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತು.

ಧ್ರುವ ಸರ್ಜಾ ನಟನೆಯ ಮೊದಲ ಸಿನಿಮಾ ‘ಅದ್ದೂರಿ’. ಆ ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತು ಧ್ರುವ ಸರ್ಜಾ ನಡುವಿನ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯ್ತು. ‘ಅದ್ದೂರಿ’ ಚಿತ್ರದಲ್ಲಿನ ನಟನೆಗೆ ರಾಧಿಕಾ ಅವರು ‘ಉದಯ ಫಿಲ್ಮ್ ಅವಾರ್ಡ್ಸ್’ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಯಿತು. ಯಶ್ ಮತ್ತು ರಾಧಿಕಾ ಪಂಡಿತ್ ನಟನೆ ಕಂಡು ಫ್ಯಾನ್ಸ್ ವಾವ್ ಎಂದರು. ಆ ಚಿತ್ರದಲ್ಲಿನ ಅಭಿನಯಕ್ಕೆ ರಾಧಿಕಾ ಅವರಿಗೆ ‘ಸೈಮಾ ಅವಾರ್ಡ್ಸ್’ ಮತ್ತು ‘ಐಫಾ ಉತ್ಸವಂ’ನಲ್ಲಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿತು.