
ನಟಿ ರಾಧಿಕಾ ಪಂಡಿತ್ ಅವರು ವೋಟ್ ಮಾಡಿದ್ದಾರೆ. ಬೆರಳಿಗೆ ಇಂಕ್ ಇರುವ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮತದಾನ ಮಾಡುವಂತೆ ಅವರು ಅಭಿಮಾನಿಗಳ ಬಳಿ ಕೋರಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ಹುಟ್ಟೂರಾದ ಉಡುಪಿಯಲ್ಲಿ ಮತ ಹಾಕಿದ್ದಾರೆ. ‘ನಾನು ಬೆಂಗಳೂರು ಸೇರಿ 18 ವರ್ಷ ಆಗಿದೆ. ಪ್ರತಿ ಬಾರಿ ಮತ ಹಾಕಲು ನಾನು ಉಡುಪಿಗೆ ಬರುತ್ತೇನೆ. ಮತದಾನ ನಮ್ಮ ಹಕ್ಕು, ನಮ್ಮ ಜವಾಬ್ದಾರಿ’ ಎಂದಿದ್ದಾರೆ ಅವರು.

ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಕೂಡ ಮತದಾನ ಮಾಡಿದ್ದಾರೆ. ರಾಜರಾಜೇಶ್ವರಿನಗರದ ಕೆವಿಟಿ ಶಾಲೆ ಮತಗಟ್ಟೆಯಲ್ಲಿ ಅವರು ವೋಟ್ ಹಾಕಿದ್ದಾರೆ.

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ ಮತದಾನ ಮಾಡಿದ್ದಾರೆ. BTL ವಿದ್ಯಾವಾಹಿನಿ ಶಾಲೆಯಲ್ಲಿ ಉಪೇಂದ್ರ ಹಕ್ಕು ಚಲಾಯಿಸಿದ್ದಾರೆ.

ದಕ್ಷಿಣ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಹೊಸಕೆರೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶ್ ಆಗಮಿಸಿ ಮತ ಹಾಕಿದ್ದಾರೆ.

ರಾಜರಾಜೇಶ್ವರಿನಗರದ ಮೌಂಟ್ ಕಾರ್ಮೆಲ್ ಕಾಲೇಜ್ಗೆ ಆಗಮಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತದಾನ ಮಾಡಿದ್ದಾರೆ. ಈ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಇದ್ದರು.

ಬೆಂಗಳೂರಿನ ಪುಟ್ಟೇನಹಳ್ಳಿಯ ಆಕ್ಸ್ಫರ್ಡ್ ಶಾಲೆಯಲ್ಲಿ ಕಿಚ್ಚ ಸುದೀಪ್ ಅವರು ಮತದಾನ ಮಾಡಿದ್ದಾರೆ. ಕುಟುಂಬದ ಜೊತೆ ಆಗಮಿಸಿದ ಅವರು ಮತ ಹಾಕಿದ್ದಾರೆ.