AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ ಏಜೆಂಟರಿಂದ ಮತಗಟ್ಟೆ ಬಳಿ ಗ್ಯಾರೆಂಟಿ​ ಪ್ರಚಾರ: ಮತದಾರರ ಸೆಳೆಯಲು ‘ಚೊಂಬು’ ಟೀಶರ್ಟ್

ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಟೀಮ್​ನ ಏಜೆಂಟ್​ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್​ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಪ್ರಸನ್ನ ಗಾಂವ್ಕರ್​
| Edited By: |

Updated on:Apr 26, 2024 | 9:51 AM

Share
Lok Sabha Election Karnataka 1st phase voting: Congress table agent wear the guarantee T shirt in Bengaluru

ಲೋಕಸಭೆ ಚುನಾವಣೆ 2024ರ ಎರಡನೇ ಹಂತದ (ಕರ್ನಾಟಕದ ಮೊದಲ ಹಂತದ) ಮತದಾನ ಇಂದು (ಏ.26) ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜಕಾರಣಿಗಳು, ಚಿತ್ರನಟರು ಮತ್ತು ಕ್ರೀಡಾಪಟುಗಳು ಸೇರಿದಂತೆ ಅನೇಕರು ಮತದಾನ ಮಾಡಿದರು.

1 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಎಲ್ಲ ತರಹದ ಪ್ರಚಾರ ಕಾರ್ಯಗಳಿಗೆ ತೆರ ಬಿದ್ದಿದೆ. ಆದರೂ ಕೂಡ ಕಾಂಗ್ರೆಸ್​ನ ಸೋಷಿಯಲ್ ಮೀಡಿಯಾ ಟೀಮ್​ನ ಏಜೆಂಟ್​ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್​ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

2 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವಾರ್ಡ್​​​​ನ ಮತಗಟ್ಟೆ ಸಂಖ್ಯೆ 194 ಮತ್ತು 195 ಕ್ಕೆ ಕೆಪಿಸಿಸಿ ಸೋಶಿಯಲ್ ಮೀಡಿಯಾ ಟೀಮ್ ಟೀಶರ್ಟ್​ ಧರಿಸಿಕೊಂಡು ಬಂದಿದೆ.

3 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಟೀಶರ್ಟ್​ ಮೇಲೆ ಚಂಬು ಪೋಸ್ಟ್ ಚಿತ್ರವಿರುವ ಟಿ ಶರ್ಟ್ ಧರಿಸಿ, ‘ಚೊಂಬೇಶ್ವರನ ಸಹವಾಸ ದಿನವಿಡೀ ಉಪವಾಸವೆಂದು ಬರಹ’ ಇದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.

4 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಬಿಜೆಪಿ ವಿರುದ್ಧ ಪರೋಕ್ಷವಾಗಿ ಲೇವಡಿ ಮತ್ತು ಗ್ಯಾರೆಂಟಿ ಚಿತ್ರ ಇರುವ ಟೀಶರ್ಟ್​ ಧರಿಸುವ ಮೂಲಕ ಪರೋಕ್ಷವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ.

5 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು ಪುತ್ರಿ ಸೌಮ್ಯ ರೆಡ್ಡಿ ಮತದಾನ ಮಾಡಿದರು. ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ. ಇವರ ವಿರುದ್ಧ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.

6 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮ ಪೆರೇಸಂದ್ರ ಗ್ರಾಮದ ಮತಗಟ್ಟೆಗೆ ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು. ಮತದಾರರು ತಪ್ಪದೆ ಮತದಾನದಲ್ಲಿ ಬಾಗಿಯಾಗುವಂತೆ ಮನವಿ ಮಾಡಿದರು.

7 / 8
Lok Sabha Election Karnataka 1st phase voting: Congress table agent wear the guarantee T shirt in Bengaluru

ಗೃಹ ಸಚಿವ ಡಾ ಪರಮೇಶ್ವರ್ ಪತ್ನಿ ಸಮೇತ ಆಗಮಿಸಿ ತುಮಕೂರಿನ ಸಿದ್ದಾರ್ಥ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆ ಸಂಖ್ಯೆ 57 ರಲ್ಲಿ ಮತದಾನ ಮಾಡಿದರು.

8 / 8

Published On - 9:48 am, Fri, 26 April 24

ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು

ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್​ ದೂರು: ಆರೋಪವೇನು?

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ಹಲವರು ಗಂಭೀರ

ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ

ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ

ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್

ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?

ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​

ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ

ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?