- Kannada News Photo gallery Lok Sabha Election Karnataka 1st phase voting: Congress table agent wear the guarantee T shirt in Bengaluru
ಕಾಂಗ್ರೆಸ್ ಏಜೆಂಟರಿಂದ ಮತಗಟ್ಟೆ ಬಳಿ ಗ್ಯಾರೆಂಟಿ ಪ್ರಚಾರ: ಮತದಾರರ ಸೆಳೆಯಲು ‘ಚೊಂಬು’ ಟೀಶರ್ಟ್
ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
Updated on:Apr 26, 2024 | 9:51 AM

ಲೋಕಸಭೆ ಚುನಾವಣೆ 2024ರ ಎರಡನೇ ಹಂತದ (ಕರ್ನಾಟಕದ ಮೊದಲ ಹಂತದ) ಮತದಾನ ಇಂದು (ಏ.26) ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜಕಾರಣಿಗಳು, ಚಿತ್ರನಟರು ಮತ್ತು ಕ್ರೀಡಾಪಟುಗಳು ಸೇರಿದಂತೆ ಅನೇಕರು ಮತದಾನ ಮಾಡಿದರು.

ಎಲ್ಲ ತರಹದ ಪ್ರಚಾರ ಕಾರ್ಯಗಳಿಗೆ ತೆರ ಬಿದ್ದಿದೆ. ಆದರೂ ಕೂಡ ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಟೀಮ್ನ ಏಜೆಂಟ್ರು ಗ್ಯಾರೆಂಟಿ ಯೋಜನೆಗಳ ಚಿತ್ರವಿರುವ ಟೀಶರ್ಟ್ ಧರಿಸಿ ಮತಗಟ್ಟೆ ಬಳಿ ಬಂದಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವಾರ್ಡ್ನ ಮತಗಟ್ಟೆ ಸಂಖ್ಯೆ 194 ಮತ್ತು 195 ಕ್ಕೆ ಕೆಪಿಸಿಸಿ ಸೋಶಿಯಲ್ ಮೀಡಿಯಾ ಟೀಮ್ ಟೀಶರ್ಟ್ ಧರಿಸಿಕೊಂಡು ಬಂದಿದೆ.

ಟೀಶರ್ಟ್ ಮೇಲೆ ಚಂಬು ಪೋಸ್ಟ್ ಚಿತ್ರವಿರುವ ಟಿ ಶರ್ಟ್ ಧರಿಸಿ, ‘ಚೊಂಬೇಶ್ವರನ ಸಹವಾಸ ದಿನವಿಡೀ ಉಪವಾಸವೆಂದು ಬರಹ’ ಇದ್ದು, ಪರೋಕ್ಷವಾಗಿ ಬಿಜೆಪಿ ವಿರುದ್ಧ ಲೇವಡಿ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಪರೋಕ್ಷವಾಗಿ ಲೇವಡಿ ಮತ್ತು ಗ್ಯಾರೆಂಟಿ ಚಿತ್ರ ಇರುವ ಟೀಶರ್ಟ್ ಧರಿಸುವ ಮೂಲಕ ಪರೋಕ್ಷವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ.

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು ಪುತ್ರಿ ಸೌಮ್ಯ ರೆಡ್ಡಿ ಮತದಾನ ಮಾಡಿದರು. ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಇವರ ವಿರುದ್ಧ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಸ್ವಗ್ರಾಮ ಪೆರೇಸಂದ್ರ ಗ್ರಾಮದ ಮತಗಟ್ಟೆಗೆ ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು. ಮತದಾರರು ತಪ್ಪದೆ ಮತದಾನದಲ್ಲಿ ಬಾಗಿಯಾಗುವಂತೆ ಮನವಿ ಮಾಡಿದರು.

ಗೃಹ ಸಚಿವ ಡಾ ಪರಮೇಶ್ವರ್ ಪತ್ನಿ ಸಮೇತ ಆಗಮಿಸಿ ತುಮಕೂರಿನ ಸಿದ್ದಾರ್ಥ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮತಗಟ್ಟೆ ಸಂಖ್ಯೆ 57 ರಲ್ಲಿ ಮತದಾನ ಮಾಡಿದರು.
Published On - 9:48 am, Fri, 26 April 24




