Updated on: Jul 26, 2023 | 2:31 PM
ನಟಿ ರಾಗಿಣಿ ದ್ವಿವೇದಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಈಗ ಅವರು ಮೋಹನ್ಲಾಲ್ ಜೊತೆ ನಟಿಸುತ್ತಿದ್ದಾರೆ.
ಮೋಹನ್ಲಾಲ್ ಅಭಿನಯದ ‘ವೃಷಭ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿರುವುದಕ್ಕೆ ರಾಗಿಣಿ ದ್ವಿವೇದಿ ಸಖತ್ ಖುಷಿ ಆಗಿದ್ದಾರೆ.
ಕನ್ನಡದ ನಿರ್ದೇಶಕ ನಂದಕಿಶೋರ್ ಅವರು ‘ವೃಷಭ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಈ ಚಿತ್ರದ ಪಾತ್ರವರ್ಗ ಗಮನ ಸೆಳೆಯುತ್ತಿದೆ.
ಮೋಹನ್ಲಾಲ್ ಅವರಂತಹ ಹಿರಿಯ ನಟರ ಜೊತೆ ನಟಿಸುವ ಅವಕಾಶ ಸಿಗೋದು ಎಂದರೆ ತಮಾಷೆಯ ಮಾತಲ್ಲ. ಅಂಥ ಚಾನ್ಸ್ ರಾಗಿಣಿ ದ್ವಿವೇದಿ ಅವರ ಪಾಲಾಗಿದೆ. ಅದಕ್ಕಾಗಿ ಅವರು ಚಿತ್ರತಂಡಕ್ಕೆ ಧನ್ಯವಾದ ತಿಳಿದಿದ್ದಾರೆ.
‘ವೃಷಭ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಮಾಲಿವುಡ್ನಲ್ಲಿ ಮೋಹನ್ಲಾಲ್ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಏಕ್ತಾ ಕಪೂರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅವರ ಜೊತೆ ಕನೆಕ್ಟ್ ಮೀಡಿಯಾ, ಎವಿಎಸ್ ಸ್ಟುಡಿಯೋಸ್ ಸಂಸ್ಥೆಗಳು ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿವೆ.
ಮೋಹನ್ಲಾಲ್ ಅವರಿಗೆ ಸಖತ್ ಬೇಡಿಕೆ ಇದೆ. ಈಗ ಅವರಿಗೆ 63 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಫಿಟ್ ಆಗಿದ್ದಾರೆ. ಪ್ರತಿದಿನ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಅದರ ಫೋಟೋಗಳೂ ವೈರಲ್ ಆಗಿವೆ.