ಶೂಟಿಂಗ್ ವೇಳೆ ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು; ನೋವಿನಲ್ಲೂ ಸ್ಮೈಲ್ ಮಾಡಿದ ನಟಿ
Malatesh Jaggin | Updated By: ರಾಜೇಶ್ ದುಗ್ಗುಮನೆ
Updated on:
Mar 14, 2024 | 6:56 AM
ರಾಗಿಣಿ ಕಾಲಿಗೆ ಪೆಟ್ಟಾದ ಫೋಟೋ ವೈರಲ್ ಆಗಿದೆ. ಈ ವೇಳೆಯೂ ಅವರು ಸ್ಮೈಲ್ ಮಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ. ರಾಗಿಣಿ ಒಂದು ವಾರ ವಿಶ್ರಾಂತಿ ಪಡೆಯಬೇಕಿದೆ.
1 / 5
ಬೆಂಗಳೂರು ಸ್ಟುಡಿಯೋ ಒಂದರಲ್ಲಿ ‘ಮದನಿಕ’ ಹೆಸರಿನ ಸಿನಿಮಾ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ಕಾಲಿಗೆ ಪೆಟ್ಟಾಗಿದೆ. ‘ಮದನಿಕ’ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
2 / 5
ನಟಿ ರಾಗಿಣಿ ದ್ವಿವೇದಿ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಏನೇ ಬಂದರೂ ಅವರು ಮುನ್ನುಗ್ಗುತ್ತಿದ್ದಾರೆ. ಈಗ ಅವರ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ.
3 / 5
ಕಾಲಿಗೆ ಪೆಟ್ಟಾದ ಫೋಟೋ ವೈರಲ್ ಆಗಿದೆ. ಈ ವೇಳೆಯೂ ಅವರು ಸ್ಮೈಲ್ ಮಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಏನೂ ಇಲ್ಲ ಎಂದು ವೈದ್ಯರು ಹೇಳಿರುವುದಾಗಿ ವರದಿ ಆಗಿದೆ. ರಾಗಿಣಿ ಒಂದು ವಾರ ವಿಶ್ರಾಂತಿ ಪಡೆಯಬೇಕಿದೆ.
4 / 5
‘ಮದನಿಕ’ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದರ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ರಾಗಿಣಿ ಭಾಗದ ಶೂಟಿಂಗ್ನ ಮುಂದೂಡಲಾಗಿದೆ.
5 / 5
ರಾಗಿಣಿ ದ್ವಿವೇದಿ ಅವರು ತುಪ್ಪದ ಬೆಡಗಿ ಎಂದೇ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಖ್ಯಾತಿ ಹೆಚ್ಚುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಿಸಲಾಗುತ್ತಿದೆ.