ರಾಯರ ದರ್ಶನ ಪಡೆದ ನೆಹರು ವಂಶದ ಮೊದಲ ಕುಡಿ ರಾಹುಲ್ ಗಾಂಧಿ
ರಾಯಚೂರಿನಲ್ಲಿ ಭಾರತ್ ಜೋಡೊ ಯಾತ್ರೆ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ರಾಯರ ದರ್ಶನ ಪಡೆದು ಪುನೀತರಾದರು.

1 / 6

2 / 6

3 / 6

4 / 6

5 / 6

6 / 6
By signing in or creating an account, you agree with Associated Broadcasting Company's Terms & Conditions and Privacy Policy.
Updated on: Oct 20, 2022 | 9:59 PM
ಭಾರತ್ ಜೋಡೊ ಯಾತ್ರೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನೆಹರು ವಂಶದ ಮೊದಲ ಕುಡಿ ರಾಹುಲ್ ಗಾಂಧಿ.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಗಾಂಧಿಯನ್ನು ಶ್ರೀ ಸುಭುದೇಂದ್ರ ತೀರ್ಥರು ಸ್ವಾಗತಿಸಿ ಆಶಿರ್ವಚನ ನೀಡಿದರು.
ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದ ರಾಹುಲ್ ಗಾಂಧಿ ಬಳಿಕ ರಾಯರ ದರ್ಶನ ಪಡೆದು ಪುನೀತರಾದರು. ಈ ವೇಳೆ ಡಿ.ಕೆ ಶಿವಕುಮಾರ ಹಾಗೂ ಸುರ್ಜೆವಾಲಾ ಹಾಗೂ ಟೀಂ ಸಾಥ್ ನೀಡಿದರು.
ರಾಘವೇಂದ್ರಸ್ವಾಮಿಗೆ ಸ್ವತಃ ರಾಹುಲ್ ಗಾಂಧಿ ಆರತಿ ಬೆಳಗಿದರು.
ಇಂದು ಮಂತ್ರಾಲಯದ ಹೊರ ವಲಯದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಿಗ್ಗೆ 6.30ರಿಂದ ರಾಯಚೂರಿನಲ್ಲಿ ಯಾತ್ರೆ ಆರಂಭಿಸಲಿದ್ದಾರೆ.