- Kannada News Photo gallery Rajasthan: Rajasthan Education Department organizes two-day brainstorming session on education in Kumbhalgarh of Rajasthan
ಶಿಕ್ಷಣದ ಕುರಿತು ಕುಂಭಾಲ್‌ಘರ್‌ದಲ್ಲಿ ಎರಡು ದಿನ ಚಿಂತನಾ ಸಭೆ, ಕರ್ನಾಟಕದಿಂದ ಪ್ರಸಿದ್ಧ ಶಿಕ್ಷಣತಜ್ಞರು, ಅಧಿಕಾರಿಗಳು ಭಾಗಿ
ರಾಜ್ಯದಲ್ಲಿ ಶಿಕ್ಷಣವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಶಿಕ್ಷಣ ಇಲಾಖೆಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಕುಂಭಾಲ್‌ಘರ್‌ನಲ್ಲಿ ಶಿಕ್ಷಣದ ಕುರಿತು ನಡೆದ ಎರಡು ದಿನಗಳ ಚಿಂತನಾ ಸಭೆಯೂ ಇದಕ್ಕೆ ಸಾಕ್ಷಿಯಾಗಿದ್ದು, ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
Updated on:Aug 23, 2025 | 6:43 PM

ರಾಜಸ್ಥಾನ ಶಿಕ್ಷಣ ಇಲಾಖೆಯು ಕುಂಭಾಲ್‌ಘರ್ ದ 'ದಿ ಕುಂಭ ರೆಸಿಡೆನ್ಸಿ'ಯಲ್ಲಿ ಆಗಸ್ಟ್ 22 ಹಾಗೂ 23 ರಂದು ಎರಡು ದಿನಗಳ ಶಿಕ್ಷಣದ ಕುರಿತು ಚಿಂತನಾ ಸಭೆ "ಥಿಂಕ್ ಟ್ಯಾಂಕ್"ನ್ನು ಆಯೋಜಿಸಿತ್ತು. ರಾಜ್ಯದ ಪ್ರಸಿದ್ಧ ಶಿಕ್ಷಣತಜ್ಞರು, ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ದೆಹಲಿ ಅಕ್ಷರಧಾಮದ ಪೂಜ್ಯ ಸಂತ ಡಾ. ಜ್ಞಾನಾನಂದ ಸ್ವಾಮಿಗಳು ಈ ಸಭೆಯಲ್ಲಿ ಅತಿಥಿ ಭಾಷಣಕಾರರಾಗಿ ಭಾಗವಹಿಸಿದ್ದರು.

ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ, ಕೌಶಲ್ಯ ಮತ್ತು ಉದ್ಯೋಗಕ್ಕೆ ಶಿಕ್ಷಣದ ಕೊಡುಗೆ ಮತ್ತು ಹೊಸ ಆಯಾಮಗಳು, ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಸಮಸ್ಯೆಗಳು ಮತ್ತು ಹೊಸ ಆಲೋಚನೆಗಳನ್ನು ಕೇಂದ್ರೀಕರಿಸಿ ಹೀಗೆ ವಿವಿಧ ಸೆಷನ್ಸ್‌ಗಳು ನಡೆದವು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಜ್ಞಾನಾನಂದ ಸ್ವಾಮಿ, ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾದ ಮೌಲ್ಯಾಧಾರಿತ ಶಿಕ್ಷಣದ ಕುರಿತು ಪ್ರಮುಖ ಸ್ವಾಮಿ ಮಹಾರಾಜ್ ಮತ್ತು ಮಹಾಂತ ಸ್ವಾಮಿ ಮಹಾರಾಜ್ ಅವರ ಅಭಿಪ್ರಾಯಗಳನ್ನು ಮಂಡಿಸಿದರು. ಶಿಕ್ಷಣದ ಜೊತೆಗೆ, ಅವರು ಚಾರಿತ್ರ್ಯ, ಸೇವೆ, ಸ್ವಾವಲಂಬನೆ ಮತ್ತು ನೈತಿಕತೆಗೆ ವಿಶೇಷ ಒತ್ತು ನೀಡಿದರು.

ಶಿಕ್ಷಣ ಸಚಿವ ಶ್ರೀ ಮದನ್ ದಿಲಾವರ್ ಜಿ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಡಾ. ಜ್ಞಾನಾನಂದ ಸ್ವಾಮಿ ಅವರು ಐಪಿಡಿಸಿ (ಇಂಟಿಗ್ರೇಟೆಡ್ ಪರ್ಸನಾಲಿಟಿ ಡೆವಲಪ್‌ಮೆಂಟ್ ಕೋರ್ಸ್) ಮತ್ತು ಬಿಎಪಿಎಸ್ ಸಂಸ್ಥೆ ನಡೆಸುತ್ತಿರುವ 'ಚಲೋ ಆದರ್ಶ್ ಬನೆ' ಕಾರ್ಯಕ್ರಮದ ಕುರಿತು ವಿಶೇಷ ಚರ್ಚೆ ನಡೆಸಿದರು. ಪೂಜ್ಯ ಸರ್ವನಿವಾಸ ಸ್ವಾಮಿಗಳು ಅವರಿಗೆ ಪ್ರಸಾದ ನೀಡಿ ಆಶೀರ್ವಾದಿಸಿದರು.

ಈ ಸಭೆಯಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಚಿವ ಶ್ರೀ ಮದನ್ ದಿಲಾವರ್ ಜಿ, "ಶಿಕ್ಷಣವು ಯಾವುದೇ ರಾಷ್ಟ್ರದ ಆತ್ಮ. ಸಂಸ್ಕೃತಿ, ನೀತಿಶಾಸ್ತ್ರ ಮತ್ತು ಮೌಲ್ಯಗಳನ್ನು ಆಧರಿಸಿದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಿದಾಗ ಮಾತ್ರ ದೇಶದ ಜವಾಬ್ದಾರಿಯುತ ನಾಗರಿಕರು ಸಿದ್ಧರಾಗುತ್ತಾರೆ" ಎಂದು ತಿಳಿಸಿದರು.

ಶಿಕ್ಷಣ ಸಚಿವರೊಂದಿಗೆ, ಶ್ರೀ ವಿಶ್ವ ಮೋಹನ್ ಶರ್ಮಾ (ಐಎಎಸ್), ಶ್ರೀ ಹರೀಶ್ ಲಡ್ಡಾ (ಜಂಟಿ ಆಡಳಿತ ಕಾರ್ಯದರ್ಶಿ, ಐಎಎಸ್), ಶ್ರೀ ಸುರೇಂದ್ರ ಸಿಂಗ್ ರಾಥೋಡ್ (ಶಾಸಕರು, ಕುಂಭಾಲ್‌ಗಢ), ಶ್ರೀ ಆರ್.ಆರ್. ವ್ಯಾಸ್ (ಕಾರ್ಯದರ್ಶಿ, ಗುಜರಾತ್ ಮಾಧ್ಯಮಿಕ ಶಿಕ್ಷಣ ಮಂಡಳಿ), ಡಾ. ಕರ್ನೈಲ್ ಸಿಂಗ್ (ಹೆಚ್ಚುವರಿ ನಿರ್ದೇಶಕ), ಶ್ರೀ ಪವನ್ ಜೈಮಿನ್ (ಜಂಟಿ ಕಾರ್ಯದರ್ಶಿ - ಕಂದಾಯ, ಐಎಎಸ್) ಭಾಗವಹಿಸಿದ್ದರು.

ಇನ್ನು ಉಳಿದಂತೆ ಶ್ರೀ ಕೃಷ್ಣ ಶರ್ಮಾ (ಜಂಟಿ ಕಾರ್ಯದರ್ಶಿ - ಬಜೆಟ್, ಐಎಎಸ್), ಶ್ರೀ ಕೃಷ್ಣ ಕುನಾಲ್ (ಐಎಎಸ್), ಡಾ. ಅತುಲ್ ಕೊಠಾರಿ (ರಾಷ್ಟ್ರೀಯ ಕಾರ್ಯದರ್ಶಿ, ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್, ನವದೆಹಲಿ), ಶ್ರೀ ಸೀತಾ ರಾಮ್ ಜಾಟ್ (ನಿರ್ದೇಶಕರು, ಐಎಎಸ್), ಶ್ರೀಮತಿ ಶ್ವೇತಾ ಫಗಾಡಿಯಾ (ಆರ್‌ಎಸ್‌ಸಿಇಆರ್‌ಟಿ ನಿರ್ದೇಶಕರು), ಶ್ರೀ ಶರದ್ ಸಿನ್ಹಾ (ಎನ್‌ಸಿಇಆರ್‌ಟಿ ವಿಭಾಗದ ಮುಖ್ಯಸ್ಥರು), ಜೊತೆಗೆ ಅನೇಕ ಶಿಕ್ಷಣ ತಜ್ಞರು, ಅಧಿಕಾರಿಗಳು ಹಾಗೂ ವಿಷಯ ತಜ್ಞರು ಉಪಸ್ಥಿತರಿದ್ದರು.
Published On - 6:40 pm, Sat, 23 August 25




