ಹಿಮಾಲಯದ ಪದತಳದಲ್ಲಿ ರಜನೀಕಾಂತ್ ಆಧ್ಯಾತ್ಮಿಕ ಅನ್ವೇಷಣೆ: ಇಲ್ಲಿವೆ ಚಿತ್ರಗಳು

Updated on: Aug 11, 2023 | 10:15 PM

Rajinikanth: ನಟ ರಜನೀಕಾಂತ್ ಹಿಮಾಲಯದ ಪದತಳದಲ್ಲಿರುವ ಹೃಷಿಕೇಶದ ದಯಾನಂದ ಸರಸ್ವತಿ ಆಶ್ರಮದಲ್ಲಿ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

1 / 7
ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

2 / 7

'ಜೈಲರ್' ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 72 ಕೋಟಿ ಹಣ ಗಳಿಸಿ ದಾಖಲೆ ಬರೆದಿದೆ.

3 / 7

ಇದೆಲ್ಲದರ ಪರಿವೆ ಇಲ್ಲದೆ ನಟ ರಜನೀಕಾಂತ್ ಹಿಮಾಲಯದ ಪದತಳದಲ್ಲಿನ ಆಶ್ರಮವೊಂದರಲ್ಲಿ ಸಾಧು-ಸನ್ಯಾಸಿಗಳೊಟ್ಟಿಗಿದ್ದಾರೆ.

4 / 7

ಉತ್ತರಾಖಂಡ್​ನ ಹೃಷಿಕೇಷದ ದಯಾನಂದ ಸರಸ್ವತಿ ಆಶ್ರಮದಲ್ಲಿ ರಜನೀಕಾಂತ್ ನೆಲೆಸಿದ್ದಾರೆ.

5 / 7

ಅಲ್ಲಿ ಗುರುಗಳ ಪ್ರವಚನ ಕೇಳುತ್ತಾ, ಆಶ್ರಮದ ಇತರೆ ವಾಸಿಗಳ ಜೊತೆಗೆ ಅಧ್ಯಾತ್ಮ ಚರ್ಚೆಗಳಲ್ಲಿ ಭಾಗವಹಿಸಿಕೊಂಡು ಆರಾಮದಿಂದ್ದಾರೆ.

6 / 7

ರಜನೀಕಾಂತ್​ಗೆ ಹಿಮಾಲಯ ಹೊಸದೇನಲ್ಲ, ಅಲ್ಲಿನ ಹಲವು ಗುಹೆಗಳಲ್ಲಿ, ಆಶ್ರಮಗಳಲ್ಲಿ ಅಧ್ಯಾತ್ಮ ಸಾಧನೆ ಮಾಡಿದ್ದಾರೆ ರಜಿನಿ.

7 / 7

ರಜನೀಕಾಂತ್ ಐಶಾರಾಮಿ ಜೀವನ ತ್ಯಜಿಸಿ ಸರಳವಾಗಿ ಬದುಕುತ್ತಿದ್ದಾರೆ. ಅದರಲ್ಲಿಯೂ ಆಧ್ಯಾತ್ಮದ ಬಗ್ಗೆ ವಿಶೇಷ ಆಸಕ್ತಿಯನ್ನು ರಜಿನಿ ಬೆಳೆಸಿಕೊಂಡಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us