
ದೀಪಿಕಾ ದಾಸ್ ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ. ಕ್ಯಾಪ್ಟನ್ ಆಗಿಯೂ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ಅವರು ರಾಕೇಶ್ಗೆ ಒಂದು ಷರತ್ತು ಹಾಕಿದ್ದಾರೆ.

ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

ಈಗ ದೀಪಿಕಾ ದಾಸ್ ಅವರು ರಾಕೇಶ್ ಅಡಿಗಗೆ ಷರತ್ತೊಂದನ್ನು ಹಾಕಿದ್ದಾರೆ. ‘ನೀನು ನನಗೆ ಲೈನ್ ಹೊಡೆಯಬೇಕು ಎಂದರೆ ಟಾಸ್ಕ್ನಲ್ಲಿ ನೀಡಿರೋ ಬಜರ್ ಹೊಡೆಯಬೇಕು’ ಎಂದಿದ್ದಾರೆ ದೀಪಿಕಾ.

ಇದನ್ನು ಕೇಳಿ ರಾಕೇಶ್ ಖುಷಿಯಾಗಿದ್ದಾರೆ. ‘ಬಜರ್ ಹೊಡೆಯೋದಷ್ಟೇ ಏಕೆ? ಬಜರ್ನ ನಿನ್ನ ಪಕ್ಕದಲ್ಲೇ ತಂದು ಇಟ್ಟು ಬಿಡ್ತೀನಿ’ ಎಂದಿದ್ದಾರೆ ರಾಕೇಶ್. ಈ ಮಾತನ್ನು ಕೇಳಿ, ‘ರಾಕೇಶ್ ಇಂಡೈರೆಕ್ಟ್ ಆಗಿ ಫ್ಲರ್ಟ್ ಮಾಡ್ತಾ ಇದಾನೆ’ ಎಂದು ನಕ್ಕಿದ್ದಾರೆ ದೀಪಿಕಾ.

ಇದಕ್ಕೆ ಉತ್ತರಿಸಿದ ರಾಕೇಶ್, ‘ಪರೋಕ್ಷವಾಗಿ ಅಲ್ಲ ನೇರವಾಗಿಯೇ ಫ್ಲರ್ಟ್ ಮಾಡ್ತಾ ಇದೀನಿ’ ಎಂದು ನಕ್ಕಿದ್ದಾನೆ.