‘ಆರ್ಆರ್ಆರ್’ ಚಿತ್ರದಲ್ಲಿನ ಪಾತ್ರಪೋಷಣೆಗೆ ರಾಮ್ ಚರಣ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದು (ಮಾರ್ಚ್ 27) 37ನೇ ವಸಂತಕ್ಕೆ ಕಾಲಿಟ್ಟ ನಟ ಸದ್ಯ ‘ಆಚಾರ್ಯ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ರಾಮ್ ಚರಣ್ಗೆ ಸಾಕು ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅವರಿಗೆ ಸಿನಿಮಾ ಮೇಲಿರುವಷ್ಟೇ ಪ್ರೀತಿ ಅವುಗಳ ಮೇಲೂ ಇದೆ. ಇತ್ತೀಚೆಗೆ ಅವರು ‘ಆರ್ಆರ್ಆರ್’ ಪ್ರಚಾರದ ಸಮಯದಲ್ಲೂ ತಮ್ಮ ಸಾಕುನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ನಟ ಸಾಕು-ಪ್ರಾಣಿಗಳೊಂದಿಗೆ ಇರುವ ಫೋಟೋಗಳು ಇಲ್ಲಿವೆ.
ರಾಮ್ ಚರಣ್ ವನ್ಯ ಜೀವಿ ಸಂರಕ್ಷಣೆಗೆ ಸಾಕಷ್ಟು ದೇಣಿಗೆ ನೀಡುತ್ತಾರೆ. ಇತ್ತೀಚೆಗಷ್ಟೇ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಆನೆಯೊಂದನ್ನು ದತ್ತು ಪಡೆದಿದ್ದರು.
ವಿಶೇಷವೆಂದರೆ ರಾಮ್ ಚರಣ್ ತಮ್ಮ ಸಾಕು ನಾಯಿಗಳನ್ನು ಕರೆದುಕೊಂಡು ವಿಹಾರಕ್ಕೆ ಹೋಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲದಿದ್ದರೂ ಕೂಡ, ನಟ ಪ್ರಾಣಿಗಳೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ರಾಮ್ ಚರಣ್ ಫಾರ್ಮ್ನಲ್ಲಿ ಕುದುರೆಗಳು, ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳಿವೆ. ಆದರೂ ನಟನಿಗೆ ತಮ್ಮ ಸಾಕುನಾಯಿ ‘ಬ್ರಾಟ್’ ಮೇಲೆ ವಿಶೇಷ ಪ್ರೀತಿ.