Updated on: Jun 23, 2023 | 3:23 PM
ಇತ್ತೀಚೆಗಷ್ಟೆ ಪೋಷಕರಾದ ರಾಮ್ ಚರಣ್ ಹಾಗೂ ಉಪಾಸನಾ ಮಗುವಿನೊಂದಿಗೆ ಮನೆಗೆ ಹೊರಟಿದ್ದಾರೆ.
ಮೆಗಾ ಕುಡಿಯ ನೋಡಲು ಆಸ್ಪತ್ರೆ ಬಳಿ ಸೇರಿದ್ದ ಅಭಿಮಾನಿಗಳತ್ತ ರಾಮ್ ಚರಣ್-ಉಪಾಸನಾ ಕೈಬೀಸಿದ್ದಾರೆ.
ಮಗುವಿನ ಮುಖವನ್ನು ಕ್ಯಾಮೆರಾಕ್ಕೆ ಇನ್ನೂ ತೋರಿಸಿಲ್ಲವಾದರು ರಾಮ್ ಹಾಗೂ ಉಪಾಸನಾ ಮಗುವಿನ ಮುಖ ಕಾಣದಂತೆ ಕ್ಯಾಮೆರಾಕ್ಕೆ ಫೋಸು ನೀಡಿದ್ದಾರೆ.
ರಾಮ್ ಚರಣ್ ಹಾಗೂ ಉಪಾಸನಾಗೆ ಎರಡು ದಿನಗಳ ಹಿಂದಷ್ಟೆ ಹೈದರಾಬಾದ್ನ ಅಪೋಲೊ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ.
ರಾಮ್ ಚರಣ್ ತೇಜ ಹಾಗೂ ಉಪಾಸನಾ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮಗು ಜನನವಾಗಿದೆ. ಮಗುವಿನ ಆಗಮನದಿಂದ ಮೆಗಾ ಕುಟುಂಬ ತೀವ್ರ ಸಂತಸದಲ್ಲಿದೆ.
ಆಸ್ಪತ್ರೆಯಿಂದ ಹೊರಡುವ ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಮ್ ಚರಣ್, ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಖುಷಿಯನ್ನು ಅವರ ಖುಷಿಯಾಗಿ ಸಂಭ್ರಮಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ರಾಮ್ ಚರಣ್ ಹಾಗೂ ಉಪಾಸನಾಗೆ ಜನಿಸಿರುವ ಹೆಣ್ಣು ಮಗುವಿನ ಬಗ್ಗೆ ಈಗಾಗಲೇ ಕೆಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದು ಈ ಮಗುವಿನಂದ ಮನೆಯಲ್ಲಿ ಸಂತಸ, ಶುಭ ಸಮಾರಂಭಗಳು ನಡೆಯುತ್ತವೆ ಎಂದಿದ್ದಾರೆ.
ರಾಮ್ ಚರಣ್ ಹಾಗೂ ಉಪಾಸನಾ ಇನ್ನು ಕೆಲವು ವರ್ಷಗಳ ಕಾಲ ಮಗುವನ್ನು ಮಾಧ್ಯಮಗಳ ಕ್ಯಾಮೆರಾದಿಂದ ದೂರವೇ ಇಡಲಿದ್ದಾರೆ.