ಅಯೋಧ್ಯೆಗೆ ರಾಮ ಲಲ್ಲಾ ಮೂರ್ತಿ ಆಗಮನ, ರಾಮ ಹೇಗಿದ್ದಾನೆ ಎಂದು ಚಿತ್ರಗಳಲ್ಲಿ ನೋಡಿ

Updated on: Jan 17, 2024 | 6:28 PM

ಅಯೋಧ್ಯಾ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ರಾಮ ಮಂದಿರ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ವಿದ್ಯುಕ್ತವಾಗಿ ಆರಂಭವಾಗಿವೆ. ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಇದಕ್ಕಾಗಿ ವಿವಿಧ ಕೈಂಕರ್ಯಗಳು ಜನವರಿ 16ರ ಬೆಳಗ್ಗೆಯಿಂದಲೇ ಆರಂಭವಾಗಿವೆ. ಈಗ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಅಯೋಧ್ಯೆ ತಲುಪಿದೆ. ರಾಮಲಲ್ಲಾನ ದರ್ಶನ.

1 / 6
ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಅಯೋಧ್ಯೆ ತಲುಪಿದೆ.

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಅಯೋಧ್ಯೆ ತಲುಪಿದೆ.

2 / 6

ಇಂದು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳದಿಂದ ರಾಮಂದಿರ ನಿರ್ಮಾಣದ ಆವರಣಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಗಿದೆ. ನಾಳೆ ಗರ್ಭಗುಡಿಯಲ್ಲಿ ಗೊತ್ತುಪಡಿಸಿದ ಆಸನದಲ್ಲಿ ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಲಾಗುತ್ತೆ.

3 / 6

51 ಇಂಚು ಎತ್ತರದ ಮೂರ್ತಿ ಇದಾಗಿದ್ದು, ಒಟ್ಟು ಮೂರ್ತಿಯ ಗ್ರಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ

4 / 6

51 ಇಂಚಿನ ಕಲ್ಲಿನ ವಿಗ್ರಹದಲ್ಲಿ ಶ್ರೀ ರಾಮನ ಬಾಲ್ಯದ ಸ್ವರೂಪ, ಶ್ರೀ ರಾಮನ ಮುಗ್ದತೆ, ತುಂಟತನದ ಜೊತೆಗೆ ಗಾಂಭೀರ್ಯತೆ ಸಹ ಇದೆ.

5 / 6

ವಿಶೇಷ ಅಂದ್ರೆ ಇದುವರೆಗೂ ಪುರಾಣಗಳಲ್ಲಿ, ಕಥೆಗಳಲ್ಲಿ, ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ, ಪುಸ್ತಕದ ಪುಟಗಳಲ್ಲಿ ಎಲ್ಲೂ ಸಹಾ ರಾಮಲಲ್ಲಾನನ್ನು ಯಾರು ನೋಡಿಲ್ಲ. ಇದೀಗ ವಿಗ್ರಹದ ಅಧಿಕೃತ ಫೋಟೋ ಬಹಿರಂಗವಾಗಿದೆ.

6 / 6

ಪುಟ್ಟ ಬಾಲಕ ಧನುರ್ದಾಯಿಯಾಗಿ ಕಾಣಿಸಿಕೊಂಡಿದ್ದು, ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜನವರಿ 22ರಂದು ಅನಾವರಣಗೊಳಿಸಲಿದ್ದಾರೆ.

Published On - 6:21 pm, Wed, 17 January 24

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us