- Kannada News Photo gallery Ram Mandir: Next Makar Sankranti is Deadline 50 Percent Work of Ayodhya Ram Temple Done see Photos
Ram Mandir: 2024ರ ಸಂಕ್ರಾಂತಿಯೊಳಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣ; ಶೇ. 50ರಷ್ಟು ಕಾಮಗಾರಿ ಪೂರ್ಣ
ಇದುವರೆಗೆ ಅಯೋಧ್ಯೆಯ ರಾಮ ಮಂದಿರದ ಶೇ.50ರಷ್ಟು ಕಾಮಗಾರಿ ನಡೆದಿದೆ. 2024ರ ವೇಳೆಗೆ ನೆಲ ಮಹಡಿ ಪೂರ್ಣಗೊಳ್ಳಲಿದೆ. ಸೂರ್ಯೋದಯದ ಕಿರಣಗಳು ಮೂರ್ತಿಯ ಹಣೆಯ ಮೇಲೆ ಬೀಳುವ ರೀತಿಯಲ್ಲಿ ಗರ್ಭಗುಡಿಯನ್ನು ವಿನ್ಯಾಸಗೊಳಿಸಲಾಗಿದೆ.
Updated on: Jan 14, 2023 | 2:13 PM

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಮುಂದಿನ ವರ್ಷ ಸಂಕ್ರಾಂತಿಯೊಳಗೆ ಪೂರ್ಣಗೊಳ್ಳಲಿದೆ.

ಈಗಾಗಲೇ ರಾಮ ಮಂದಿರದ ನಿರ್ಮಾಣ ಕಾಮಗಾರಿ ಶೇ. 50ರಷ್ಟು ಪೂರ್ಣಗೊಂಡಿದೆ.

ರಾಮ ಮಂದಿರದ ಪ್ರಗತಿ ಕಾಮಗಾರಿಯನ್ನು ಪರಿಶೀಲಿಸಿದ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ "ಮುಂದಿನ ದಿನಗಳಲ್ಲಿ ಹೊಸ ಅಯೋಧ್ಯೆ ರೂಪುಗೊಳ್ಳಲಿದೆ" ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣವು ಅರ್ಧ ಭಾಗದಷ್ಟು ಪೂರ್ಣಗೊಂಡಿದೆ. ಮುಂದಿನ ವರ್ಷದ 'ಮಕರ ಸಂಕ್ರಾಂತಿ' ವೇಳೆಗೆ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಗರ್ಭಗುಡಿ ಸಿದ್ಧವಾಗಲಿದೆ.

2024ರಲ್ಲಿ ಸೂರ್ಯನು ‘ಮಕರ ರಾಶಿ’ಗೆ ಪ್ರವೇಶಿಸುತ್ತಿದ್ದಂತೆ ಭಗವಾನ್ ರಾಮನು ತನ್ನ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದ್ದಾನೆ.

ಅಯೋಧ್ಯೆಯ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಹನುಮಾನ್‌ಗರ್ಹಿಯಲ್ಲಿ ಎಸ್ಕಲೇಟರ್ ಅಥವಾ ಲಿಫ್ಟ್ ಅನ್ನು ಸ್ಥಾಪಿಸಲು ಸೂಚಿಸಿದ್ದಾರೆ.

ವೃದ್ಧರು ಮತ್ತು ಅಂಗವಿಕಲರಿಗೆ ಅನುಕೂಲವಾಗಲಿ ಎಂದು ಈ ವ್ಯವಸ್ಥೆ ಮಾಡಲಾಗಿದೆ.

ಪಂಚಕೋಶಿ ಮಾರ್ಗ, ಚೌಡಾ ಕೋಸಿ ಮಾರ್ಗ ಮಾರ್ಗಗಳಲ್ಲಿ ಭಕ್ತರಿಗಾಗಿ ಬೆಂಚುಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಹೊಸ ಅಯೋಧ್ಯೆ ರೂಪುಗೊಳ್ಳಲಿದೆ. ಅಯೋಧ್ಯೆಯನ್ನು ನೋಡಲು ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಜನರು ಬರುತ್ತಾರೆ.

ರಾಮಾಯಣದ ಶ್ರೀರಾಮನ ಪಾತ್ರ ಮತ್ತು ಆದರ್ಶಗಳ ಆಧಾರದ ಮೇಲೆ ನಾವು ಅಯೋಧ್ಯೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ಎಲ್ಲೆಲ್ಲಿ ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಶೇ. 51ರಷ್ಟು ಜನ್ಮಭೂಮಿ ಪಥ (ಸುಗ್ರೀವ ಕೋಟೆಯಿಂದ ಶ್ರೀ ರಾಮ ಜನ್ಮಭೂಮಿ ಮಂದಿರ ಮಾರ್ಗ) ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಭಕ್ತಿ ಪಥಕ್ಕಾಗಿ (ಶ್ರೀರಾಮ ಜನ್ಮಭೂಮಿ ಮಂದಿರ ಮಾರ್ಗಕ್ಕೆ ಶೃಂಗಾರ್ ಹಾತ್) ಭೂಮಿ ಖರೀದಿ ಮತ್ತು ಪುನರ್ವಸತಿ ಕಾರ್ಯ ಪೂರ್ಣಗೊಂಡಿದೆ.

ಹಾನಿಗೊಳಗಾದ 350 ಅಂಗಡಿಗಳಿಗೆ ಪರಿಹಾರ ನೀಡಲಾಗಿದ್ದು, ಕೆಡವುವ ಕಾಮಗಾರಿ ಮುಗಿಸಿ ಸಿವಿಲ್ ಕಾಮಗಾರಿ ಆರಂಭಿಸಲಾಗಿದೆ.

ರಾಮಪಥಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

ರಾಮ ಮಂದಿರದ ನೆಲ ಅಂತಸ್ತಿನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆಗಸ್ಟ್ ವೇಳೆಗೆ ಗರ್ಭಗುಡಿಯ ನೆಲ ಮಹಡಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

21 ಅಡಿ ಎತ್ತರದ ಸ್ತಂಭ ಅಥವಾ ದೇವಾಲಯದ ನೆಲದ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ. 11 ಅಡಿ ಎತ್ತರದಲ್ಲಿ ಕಲ್ಲುಗಳ ಚಪ್ಪಡಿ ಹಾಕಲಾಗಿದೆ.

ಇಬ್ಬರು ವಾಸ್ತುಶಿಲ್ಪಿಗಳಾದ CB ಸೋಂಪುರ ಮತ್ತು ಜೈ ಕಾರ್ತಿಕ್ ಈ ದೇವಾಲಯದ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಶೇ.45ಕ್ಕೂ ಹೆಚ್ಚು ಕಾಮಗಾರಿ ನಡೆದಿದೆ. 2024ರ ವೇಳೆಗೆ ನೆಲ ಮಹಡಿ ಪೂರ್ಣಗೊಳ್ಳಲಿದೆ. ಆದರೆ, ಮೇಲಕ್ಕೆ ತಲುಪಲು ಕನಿಷ್ಠ 5 ತಿಂಗಳುಗಳು ಬೇಕಾಗುತ್ತದೆ ಎನ್ನಲಾಗಿದೆ.




